BWF Finals : ಚೀನಾದಿಂದ ಥೈಲ್ಯಾಂಡ್ ಗೆ ಶಿಫ್ಟ್..!!
ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಟೂರ್ನಿ ಚೀನಾದಿಂದ ಥಾಯ್ಲೆಂಡ್ಗೆ ಸ್ಥಳಾಂತರವಾಗಿದೆ.
ಈ ವರ್ಷದ ಕೊನೆಯ ಟೂರ್ನಿ ಚೀನಾದಲ್ಲಿ ಆಯೋಜನೆಗೊಂಡಿತ್ತು. ಚೀನಾ ನಗದರಲ್ಲಿ ಕರೋನಾ ಹೆಚ್ಚಾಗಿದ್ದರಿಂದ ಗಾಂಗ್ಜುವಿನಿಂದ ಬ್ಯಾಂಕಾಕ್ಗೆ ಸ್ಥಳಾಂತರಿಸಲಾಗಿದೆ. ಒಂದು ವಾರ ಮುಂಚೆಯೆ ಟೂರ್ನಿ ಆರಂಭವಾಘಲಿದೆ. ಡಿ.7ರಿಂದ ಡಿ.11ರವರೆಗೆ ನಡೆಯಲಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ಬಿಡಬ್ಲ್ಯುಎಫ್ ಹೇಳಿದೆ.
ಈ ಸ್ಥಳಾಂತರ ಮುಂಬರುವ ಏಷ್ಯಾನ್ ಗೇಮ್ಸ್ ಕ್ರೀಡಾಕೂಟದ ಮೇಲೂ ಕರಿನೆರಳು ಬಿದ್ದಿದೆ.
ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ಚೀನಾ ಬ್ಯಾಡ್ಮಿಂಟನ್ ಅಸೋಸಿಯೇಷನ್ನೊಂದಿಗೆ ಮಾತುಕತೆ ನಡೆಸಿ ಈ ತೀರ್ಮಾನ ಕೈಗೊಂಡಿದೆ.
ಟೂರ್ನಿಯ ಆತಿಥ್ಯ ವಹಿಸಿಕೊಂಡ ಥಾಯ್ಲೆಂಡ್ಗೆ ಧನ್ಯವಾದ ಹೇಳಿದೆ.
ವಿಶ್ವದ ಅಗ್ರ 8 ಆಟಗಾರರು ಈ ಟೂರ್ನಿಯಲ್ಲಿ ಆಡಲಿದ್ದಾರೆ. ತಾರಾ ಆಟಗಾರ್ತಿ ಸಿಂಧು ಟೂರ್ನಿಯಿಂದ ಹೊರ ನಡೆದಿದ್ದಾರೆ.ಎಚ್.ಎಸ್.ಪ್ರಣಯ್ ಪ್ರತಿಷ್ಠಿತ ಟೂರ್ನಿ ಆಡುವ ಏಕೈಕ ಭಾರತೀಯ ಆಟಗಾರರಾಗಿದ್ದಾರೆ.