ಬೈ ಎಲೆಕ್ಷನ್ ಫಲಿತಾಂಶ ಪ್ರಕಟ : ಯಾರಿಗೆ ಎಷ್ಟು ಮತ..? ಎಷ್ಟು ಮತಗಳ ಅಂತರದ ಗೆಲುವು..? congress bjp JDS saaksha tv
ಬೆಂಗಳೂರು ; ಹಾನಗಲ್ ಮತ್ತು ಸಿಂದಗಿ ಉಪಚುನಾವಣಾ ಫಲಿತಾಂಶ ಪ್ರಕಟವಾಗಿದೆ.
ಸಿಂಧಗಿ ಕ್ಷೇತ್ರದಲ್ಲಿ ಆಡಳಿತರೂಢ ಬಿಜೆಪಿಗೆ ಮತದಾರ ಮಣೆ ಹಾಕಿದ್ದರೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯ ಹಾನಗಲ್ ನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ 93 ಸಾವಿರದ 380 ಮತ ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 62 ಸಾವಿರದ 292 ಮತ ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ 4 ಸಾವಿರದ 321 ಮತಗಳಿಸಿದ್ದಾರೆ.
31,185 ಮತಗಳ ಅಂತರದಿಂದ ಬಿಜೆಪಿಯ ರಮೇಶ್ ಭೂಸನೂರ ಗೆಲುವು ದಾಖಲಿಸಿದ್ದಾರೆ.
ಇತ್ತ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ 87 ಸಾವಿರದ 113, ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ಅವರು 79 ಸಾವಿರದ 515 ಹಾಗೂ ಜೆಡಿಎಸ್ ಅಭ್ಯರ್ಥಿ ನಿಯಾಜ್ ಷೇಕ್ 921 ಮತ ಪಡೆದಿದ್ದಾರೆ.
ಏಳು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಕಾಂಗ್ರೆಸ್ ಶ್ರೀನಿವಾಸ್ ಮಾನೆ ಗೆಲುವು ಸಾಧಿಸಿದ್ದಾರೆ.