ಬೆಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನೆಲೆ ಬಡ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಬಡರೋಗಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಬಡವರಿಗೆ ರಾಜ್ಯಾದ್ಯಂತ ಉಚಿತ ಔಷಧಿ ಪೂರೈಕೆ ಮಾಡಲು ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಅವರು ಮುಂದಾಗಿದ್ದು, ಅಭಿಯಾನ ಆರಂಭಿಸಿದ್ದಾರೆ.
ಈ ಬಗ್ಗೆ ಸ್ವತಃ ವಿಜಯೇಂದ್ರ ಅವರು ತಮ್ಮ ಪೇಸ್ ಪೇಕ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ಪ್ರತಿ ಜಿಲ್ಲೆಯಲ್ಲಿ ಮೂವರು ಕಾರ್ಯಕರ್ತರನ್ನ ನಿಯೋಜಿಸಿದ್ದೇವೆ. ಆಯಾ ಜಿಲ್ಲೆಗಳ ನಿಯೋಜಿತ ಕಾರ್ಯಕರ್ತರಿಗೆ ಫೋನ್ ಮಾಡಿದರೆ ಉಚಿತ ಔಷಧಿ ತಲುಪಿಸುತ್ತಾರೆ ಎಂದು ತಿಳಿಸಿದ್ದಾರೆ.
ಇನ್ನು ವಿಜಯೇಂದ್ರ ಅವರ ಟೀಂಗೆ ಪೋನ್ ಮಾಡಿದರೆ ಸಾಕು. ಮನೆ ಬಾಗಿಲಿಗೆ ಅಗತ್ಯವಾದ ಔಷಧಿ ಬರುತ್ತವೆ. ಪ್ರತಿ ಜಿಲ್ಲೆಯಲ್ಲಿ ಮೂವರು ಔಷಧಿ ಪೂರೈಕೆ ಕಾರ್ಯ ನಿರ್ವಹಿಸುತ್ತಾರೆ. ಹಿರಿಯರು, ಮಹಿಳೆಯರು, ಸಣ್ಣ ಪುಟ್ಟ ಖಾಯಿಲೆಗೆ ಔಷಧಿ ಬೇಕಾದವರಿಗೆ ಔಷಧಿ ಪೂರೈಸಲಿದ್ದಾರೆ.