ಹಸೆಮಣೆ ಏರಬೇಕಿದ್ದ ವರ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾನೆ Saaksha Tv
ಹುಬ್ಬಳ್ಳಿ: ನಗರದ ಕೊಪ್ಪಿಕೊರ್ ರಸ್ತೆಯ ಎಸ್ಬಿಐ ಶಾಖೆಯಲ್ಲಿ ಸಿನಿಮೀಯ ರೀತಿಯಲ್ಲಿ ಚಾಕು ತೋರಿಸಿ ದರೋಡೆ ಮಾಡಿದ ಆರೋಪಿ ಪ್ರವೀಣಕುಮಾರ ಪಾಟೀಲನನ್ನು ಪೊಲೀಸರು ಅರೇಸ್ಟ್ ಮಾಡಿದ್ದಾರೆ.
ನಿನ್ನೆ ಸಂಜೆ ಸಂಜೆ ಮಂಕಿ ಕ್ಯಾಪ್ ಧರಿಸಿಕೊಂಡು ಬಂದ ಪ್ರವೀಣಕುಮಾರ ಬ್ಯಾಂಕ್ ನ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಗೆ ಚಾಕು ತೋರಿಸಿ 6.39 ಲಕ್ಷ ರೂ ಹಣವನ್ನು ದೋಚಿಕೊಂಡಿದ್ದಾನೆ. ದೋಚಿಕೊಂಡು ಪರಾರಿಯಾಗುವ ವೇಳೆ ಸ್ಥಳಿಯರ ಸಹಾಯದಿಂದ ಈತನನ್ನು ಪೊಲೀಸರು ಸಿನಿಮೀಯ ರೀತಿ ಸೆರೆ ಹಿಡದಿದ್ದು, ಹುಬ್ಬಳ್ಳಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತ 2 ದಿನದಲ್ಲಿ ಹಸೆಮಣೆ ಏರಬೇಕಿದ್ದ ವರ. ಆದರೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾನೆ. ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಉಮೇಶ್ ಬಂಗಾರಿ ಹಾಗೂ ಉಪನಗರ ಪೊಲೀಸ್ ಠಾಣೆ ಪೇದೆ ಮಂಜುನಾಥ್ ಹಾಲವರ ಆರೋಪಿಯನ್ನು ಬಂಧಿಸಿದ್ಧಾರೆ. ಖದೀಮನನ್ನ ಬಂಧಿಸಿದ ಪೊಲೀಸ್ ಸಿಬ್ಬಂದಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಲಾಬೂ ರಾಮ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನ ಹಿಡಿದು ಸಾಹಸ ಮೆರೆದ ಸಿಬ್ಬಂದಿಗೆ ತಲಾ 25 ಸಾವಿರ ಬಹುಮಾನ ನೀಡಿ ಅಭಿನಂದಿಸಿದ್ದಾರೆ.








