ಬೇಡಿಕೆ ಈಡೇರಿಸಲ್ಲ, ಸಂಬಳ ಕೊಡಲ್ಲ : ಸಿಎಂ ಸ್ಪಷ್ಟನೆ
ಬೆಂಗಳೂರು : ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಮುಷ್ಕರ ನಿರತ ಸಿಬ್ಬಂದಿಗಳ ಸಂಬಳ ನೀಡಲೂ ಸಾಧ್ಯವಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ಆದ್ರೆ ಸರ್ಕಾರ ಮಾತ್ರ ಈವರೆಗೂ ಅವರನ್ನ ಕರೆದು ಮಾತುಕತೆ ನಡೆಸಿಲ್ಲ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ, ಸಾರಿಗೆ ನೌಕರರೊಂದಿಗೆ ಮಾತುಕತೆಯ ಪ್ರಶ್ನೆಯೇ ಇಲ್ಲ, ಮುಷ್ಕರ ನಿರತ ಸಿಬ್ಬಂದಿಗಳ ಸಂಬಳ ನೀಡಲೂ ಸಾಧ್ಯವಿಲ್ಲ.
ಒಂದು ತಿಂಗಳ ಕಾಲ ಪ್ರತಿಭಟನೆ ನಡೆಸಿದರೂ ಸರಿ 6ನೇ ವೇತನ ಆಯೋಗ ಜಾರಿ ಅಸಾಧ್ಯ ಎಂದು ಖಡಕ್ ಆಗಿ ಹೇಳಿದ್ದಾರೆ.
ಸಾರಿಗೆ ನೌಕರರು ಯಾರದೋ ಮಾತು ಕೇಳಿ ಹಬ್ಬದ ಸಂದರ್ಭದಲ್ಲೂ ಮುಷ್ಕರ ಮಾಡುತ್ತಿದ್ದಾರೆ. ಸರ್ಕಾರದ ಯಾವುದೇ ಮನವಿಗೂ ಒಪ್ಪುತ್ತಿಲ್ಲ. ನೌಕರರ ಈ ಧೋರಣೆ ಸರಿಯಲ್ಲ.
ಮುಷ್ಕರದಿಂದ ಇಲಾಖೆ ಜೊತೆಗೆ ಸಿಬ್ಬಂದಿಗಳಿಗೇ ನಷ್ಟ. ಒಂದು ತಿಂಗಳು ಪ್ರತಿಭಟನೆ ನಡೆಸಿದರೂ ಕೂಡ ಸರ್ಕಾರ ಮಾತ್ರ ಬಗ್ಗುವ ಪ್ರಶ್ನೆ ಇಲ್ಲ ಸಿಎಂ ಸ್ಪಷ್ಟನೆ ನೀಡಿದ್ದಾರೆ.










