RRR : ಆಸ್ಕರ್ ರೇಸ್ ನಲ್ಲಿ ನಾಟು ನಾಟು ಹಾಡು – ಟಾಪ್ 15 ರಲ್ಲಿ ಶಾರ್ಟ್ ಲಿಸ್ಟ್…
ಮಳೆ ನಿಂತರೂ ಮಳೆ ಹನಿ ನಿಲ್ಲದು ಎನ್ನುವ ಹಾಗೇ ಸಿನಿಮಾ ತೆರೆಕಂಡು ತಿಂಗಳುಗಳೇ ಕಳೆದರೂ S S ರಾಜಮೌಳಿ ನಿರ್ದೇಶನದ RRR ಸಿನಿಮಾ ನಿರ್ಮಿಸುತ್ತಿರುವ ದಾಖಲೆಗಳು ನಿಲ್ಲುತ್ತಲೇ ಇಉಲ್ಲ. ವಿಶ್ವಾದ್ಯಂತ ಸುಮಾರು 1200 ಕೋಟಿ ಹಣ ಗಳಿಸಿರುವ ಚಿತ್ರ ಅನೇಕ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನ ಗೆದ್ದಿದೆ.
ಇದರ ಜೊತೆಗೆ RRR ಗೆ ಮತ್ತೊಂದು ಕಿರೀಟ ಸಿಕ್ಕಿದೆ. ಚಿತ್ರದ ‘ನಾಟು ನಾಟು’ ಹಾಡನ್ನ ಆಸ್ಕರ್ ಪ್ರಶಸ್ತಿಯಲ್ಲಿ ‘ಅತ್ಯುತ್ತಮ ಮೂಲ ಹಾಡು’ ವಿಭಾಗದಲ್ಲಿ ಸ್ಪರ್ಧಿಸಲು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಈ ವಿಭಾಗದಲ್ಲಿ, ಒಟ್ಟು 81 ಹಾಡುಗಳು ವಿಶ್ವದಾದ್ಯಂತ ಸ್ಪರ್ಧಿಸಿದ್ದವು. ಸಮಿತಿಯು ಟಾಪ್ 15 ಹಾಡುಗಳ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ಅದರಲಲ್ಲಿ ‘ನಾಟು ನಾಟು ಹಾಡಿಗೂ ಸ್ಥಾನ ಸಿಕ್ಕಿದೆ. ಈ 15 ಹಾಡುಗಳಲ್ಲಿ, ಕೇವಲ 5 ಹಾಡುಗಳು ಮಾತ್ರ ಅಧಿಕೃತ ಆಸ್ಕರ್ ನಾಮನಿರ್ದೇಶನಗಳಿಗೆ ಅರ್ಹತೆ ಪಡೆಯಲಿದೆ.
ಆಸ್ಕರ್ ನಾಮನಿರ್ದೇಶನಕ್ಕೆ ಆಯ್ಕೆಯಾದ ಭಾರತದ ಮೊದಲ ಹಾಡು ಇದಾಗಿದೆ. ಈ ಕುರಿತು ಚಿತ್ರದ ನಿರ್ಮಾಣ ಸಂಸ್ಥೆ ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಟ್ವೀಟ್ ಮಾಡಿದೆ ಮತ್ತು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.
RRR : ‘Natu Natu’ Song In Oscar Race – Short Listed In Top 15…








