BJP MLC ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರಿಗೆ ಮಾತಿನಿಂದ ಕೆಟ್ಟದಾಗಿ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ‘ಹಾಗೆ ಅಂದಿಲ್ಲ ಅನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ’ ಎಂದು ಹೆಬ್ಬಾಳ್ಳರ್ ಸವಾಲ್ ಹಾಕಿದ್ದರು. ಇದಕ್ಕೆ ಉತ್ತರ ನೀಡಿರುವ ಸಿಟಿ ರವಿ, ‘ದೂರು ಕೊಟ್ಟು, ಪೊಲೀಸ್ ದೌರ್ಜನ್ಯ ಮಾಡಿ, ಈಗ ಧರ್ಮಸ್ಥಳಕ್ಕೆ ಕರೆಯುತ್ತಾ ಇದ್ದಾರೆ. ಕಾಲ ಮೀರಿ ಹೋಗಿದೆ. ಇನ್ನೇನಿದ್ದರೂ ನ್ಯಾಯಾಲಯದ ತೀರ್ಪು ಬಂದ ಮೇಲೆ ಪ್ರತಿಕ್ರಿಯಿಸುವೆ’ ಎಂದು ತಿರುಗೇಟು ನೀಡಿದ್ದಾರೆ.
ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಉಡುಪಿಯ ಸುಂದರ ಬೀಚ್ಗಳು
ಉಡುಪಿ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಮತ್ತು ಸುಂದರ ತೀರ ಪ್ರದೇಶಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಜನವರಿಯಿಂದ ಇದುವರೆಗೆ 5,24,42,247...