C T Ravi | ರಾಷ್ಟ್ರಧ್ವಜ ಕೆಳಗಡೆ ಭಗವಾಧ್ವಜ ಹಾರಿಸಿದ್ರೆ ತಪ್ಪಲ್ಲ
ಬೆಂಗಳೂರು : ರಾಷ್ಟ್ರಧ್ವಜ ಕೆಳಗಿಳಿಸಿ ಭಗವಾಧ್ವಜ ಹಾರಿಸಿದ್ರೆ ತಪ್ಪು, ರಾಷ್ಟ್ರಧ್ವಜದ ಕೆಳಗಡೆ ಭಗವಧ್ವಜ ಹಾರಿಸಿದ್ರೆ ತಪ್ಪಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಪಾದಿದ್ದಾರೆ.
ಭಗವಾಧ್ವಜ ಹಾರಿಸುವ ಬಗ್ಗೆ ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದು, ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಿ.ಟಿ.ರವಿ. ಕಾಂಗ್ರೆಸ್ ನವರು ಹಿಜಾಬ್ ವಿಚಾರವನ್ನ ವಿಷಯಾಂತರ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರಧ್ವಜಕ್ಕೆ ಏನು ಗೌರವ ಕೊಡಬೇಕು ಅದಕ್ಕೆ ಗೌರವ ಕೊಟ್ಟಿದ್ದೇವೆ. ನಮಗೆ ಅಖಂಡ ಭಾರತದ ಅಶಯ ಅಷ್ಟೇ ಮುಖ್ಯ ಎಂದು ಸ್ಪಷ್ಟಪಡಿಸಿದರು.
ಅಲ್ಲದೇ ರಾಷ್ಟ್ರಧ್ವಜ ಕೆಳಗಿಳಿಸಿ ಭಗವಾಧ್ವಜ ಹಾರಿಸಿದ್ರೆ ತಪ್ಪು. ರಾಷ್ಟ್ರಧ್ವಜದ ಕೆಳಗಡೆ ಭಗವಾಧ್ವಜ ಹಾರಿಸಿದ್ರೆ ತಪ್ಪಲ್ಲ ಎಂದು ಪ್ರತಿಪಾದಿಸಿದ ಸಿ.ಟಿ.ರವಿ, ಕಾಂಗ್ರೆಸ್ಗೆ ಭಗವಾಧ್ವಜ ಕಂಡ್ರೆ ಆಗೋದಿಲ್ಲ ಅದಕ್ಕೆ ಅವರಿಗೆ ಉರಿ. ಅಖಂಡ ಭಾರತ ಆಗಬೇಕು ಅನ್ನೋದು ನಮ್ಮ ಅಶಯ ಎಂದು ಪುನರುಚ್ಚರಿಸಿದರು.
ಇತ್ತ ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.









