ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ : ಸಿ.ಟಿ.ರವಿ
ಚಿಕ್ಕಮಗಳೂರು : ಈಗ ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಹೆಬ್ಬೆಟ್ಟಿನ ಜನ ಕೂಡ ಮತ್ತೊಬ್ಬರ ಬಳಿ ಕೇಳಿ ಹೆಬ್ಬೆಟ್ಟು ಒತ್ತುತ್ತಾರೆ.
ಹೆಬ್ಬೆಟ್ಟಿನ ಜನರಿಗಾದ್ರೂ ತಿಳುವಳಿಕೆ ಇರುತ್ತೆ, ಇವರದ್ದು ಬರೀ ನಾಟಕ.
2016ರಲ್ಲಿ ಮತಾಂತರ ಡ್ರಾಫ್ಟ್ಗೆ ಸಹಿ ಹಾಕಿ, ನಾನು ಹಾಕಿಲ್ಲ ಅಂದ್ರು.
ನಾನು ಸಹಿ ಹಾಕಿಲ್ಲ ಅಂದ್ರು, ತೋರ್ಸಿ ಅಂದ್ರು, ಗೊತ್ತಿಲ್ದೆ ಸಹಿ ಹಾಕಿದ್ದೇನೆ ಅಂದ್ರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಇನ್ನು ಈಗ ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಸೋನಿಯಾಗಾಂಧಿ, ಪರಮೇಶ್ವರ್ ಯಾರ ನಾಯಕತ್ವದಲ್ಲಾದರು ಎಲೆಕ್ಷನ್ ಮಾಡಲಿ.
ಯಾರ ನೇತೃತ್ವದಲ್ಲಿ ಹೋದ್ರು ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಗುಡುಗಿದರು.
ಕಾಂಗ್ರೆಸ್ ನಿಲುವು ಏನೆಂದು ವಿಧಾನಸಭೆ ಅಧಿವೇಶನದಲ್ಲೇ ನೋಡಿದ್ದೇವೆ. ಕಾಂಗ್ರೆಸ್ ನಿಲುವುಗಳೇ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿವೆ.
ಅವರ ನಿಲುವು, ತತ್ವಗಳಿಂದ ಕಾಂಗ್ರೆಸ್ ಸೋಲುತ್ತಿದೆ, ಅವರ ತತ್ವ-ನಿಲುವು ಜನಹಿತಕ್ಕೆ ಮಾರಕ. ಅವರ ತತ್ವ-ನಿಲುವು ಓಲೈಕೆ ರಾಜನೀತಿ ಅದಕ್ಕೆ ಅವರು ವಿಫಲರಾಗುತ್ತಾರೆ ಎಂದು ಸಿ.ಟಿ.ರವಿ ಹೇಳಿದ್ದಾರೆ.