ರಾಮ ಮಂದಿರಕ್ಕೆ ನೀವು ಎಷ್ಟು ಹಣ ಕೊಟ್ಟಿದ್ದೀರಿ : ಹೆಚ್ ಡಿಕೆಗೆ ಸಿ.ಟಿ.ರವಿ ಪ್ರಶ್ನೆ
ಚಿಕ್ಕಮಗಳೂರು : ರಾಮಮಂದಿರಕ್ಕೆ ಹಣ ಕೊಟ್ಟವರಿಗೆ ಲೆಕ್ಕ ಕೇಳುವ ಅಧಿಕಾರವಿದೆ. ನೀವು ಎಷ್ಟು ಹಣ ಕೊಟ್ಟಿದ್ದೀರಿ?, ಕೊಟ್ಟಿರುವ ಹಣದ ಲೆಕ್ಕ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹೆಚ್ ಡಿ ಕುಮಾರಸ್ವಾಮಿಗೆ ಪ್ರಶ್ನಿಸಿದ್ದಾರೆ.
ರಾಮಮಂದಿರಕ್ಕೆ ಸಂಗ್ರಹಿಸಿದ ಹಣ ಎಲ್ಲಿ ಹೋಯಿತು? ಎಂದು ಲೆಕ್ಕ ಕೇಳಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರಿಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಪ್ರಚಾರದ ತೆವಲಿಗೆ ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಯಲ್ಲಿ ಸ್ಪಷ್ಟತೆ ಹಾಗೂ ನಿರ್ದಿಷ್ಟ ಉದ್ದೇಶಗಳಿಲ್ಲ ಎಂದು ಟಾಂಗ್ ನೀಡಿದರು..
ಅಲ್ಲದೆ ನಾವು ರಾಮಮಂದಿರ ಹೋರಾಟ ಮಾಡುವಾಗ ನೀವು ಮಸೀದಿ ಜಪ ಮಾಡುತ್ತಿದ್ರಿ. ನಾವು ಮನೆ – ಮನೆಗೆ ಹೋಗಿ ರಾಮ ಮಂದಿರದ ವಿಚಾರ ತಿಳಿಸುತ್ತಿದ್ದೆವು.
ನೀವು ಟೋಪಿ ಹಾಕೊಂಡು ನಮಾಜ್ ಮಾಡೋಕೆ ಹೋಗುತ್ತಿದ್ದಿರಿ. ರಾಮಮಂದಿರಕ್ಕೆ ಹಣ ಕೊಟ್ಟವರಿಗೆ ಲೆಕ್ಕ ಕೇಳುವ ಅಧಿಕಾರವಿದೆ.
ನೀವು ಎಷ್ಟು ಹಣ ಕೊಟ್ಟಿದ್ದೀರಿ?, ಕೊಟ್ಟಿರುವ ಹಣದ ಲೆಕ್ಕ ಹೇಳಿ. ಆಮೇಲೆ ರಾಮಮಂದಿರದ ಲೆಕ್ಕ ಕೇಳಿ ಎಂದು ಸಿ.ಟಿ.ರವಿ ಗರಂ ಆಗಿದ್ದಾರೆ.









