ಕಾಂಗ್ರೆಸ್ ಪಾದಯಾತ್ರೆ | ಉರುಳು ಸೇವೆ ಮಾಡಲಿ ಎಂದ ಸಿ.ಟಿ.ರವಿ chikkamagalore saaksha tv
ಚಿಕ್ಕಮಗಳೂರು : ಅವರು ಪಾದಯಾತ್ರೆಯಾದರೂ ಮಾಡಲಿ. ಉರುಳು ಸೇವೆ ಬೇಕಾದರೂ ಮಾಡಬಹುದು, ಮಾಡಿಕೊಳ್ಳಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಜನವರಿಯಲ್ಲಿ ಪಾದಯಾತ್ರೆ ನಡೆಸಲಿದೆ.
ಈ ಬಗ್ಗೆ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಅವರು ಪಾದಯಾತ್ರೆ, ಉರುಳು ಸೇವೆ ಏನೂ ಬೇಕಾದ್ರು ಮಾಡಬಹುದು, ಮಾಡಿಕೊಳ್ಳಲಿ.
ಕೇಂದ್ರದಲ್ಲಿ 2004 ರಿಂದ 2014 ರವರೆಗೂ ಕಾಂಗ್ರೆಸ್ ಸರ್ಕಾರವಿತ್ತು. ಅನುಮತಿ ಕೊಟ್ಟಿದ್ರಾ ಎಂದು ಪ್ರಶ್ನಿಸಿದ್ದಾರೆ.
ಇನ್ನು 1996 ರಲ್ಲಿ ಪ್ರಸ್ತಾವನೆ, ಮಂಜೂರಾತಿ ಮಾಡಿಸಿದ್ವಿ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
2004 ರಿಂದ 2014 ಕಾಂಗ್ರೆಸ್ ಸರ್ಕಾರ ಇತ್ತಲ್ಲ ಯಾಕೆ ಅನುಮತಿ ನೀಡಿಲ್ಲ.
ಇವರ ಅಡಳಿತ ಅವಧಿಯಲ್ಲಿ ತೆಗೆದುಕೊಂಡ ಕ್ರಮ ಏನು..? ರಾಜಕೀಯ ಬದ್ಧತೆ ಇಲ್ಲ ರಾಜಕೀಯ ನಾಟಕ ಆಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.









