ನಿಮ್ಮನ್ನು ಇಂದಿರಾ ಗಾಂಧಿ ಮೊಮ್ಮಗ ಎನ್ನಲ್ಲ : ಸಿದ್ದುಗೆ ಸಿ.ಟಿ.ರವಿ ಡಿಚ್ಚಿ
ಬೆಂಗಳೂರು : ನನಗೆ ಆರ್ ಎಸ್ ಎಸ್ ಬಗ್ಗೆ ಗೊತ್ತಿಲ್ಲ ಎನ್ನುವ ಸಿ.ಟಿ ರವಿ ಹಡಗೆವಾರ್ ಜೊತೆಗಿದ್ನಾ, ಇಲ್ಲಾ ಆರೆಸ್ಸೆಸ್ ಸಂಸ್ಥಾಪಕಾ ಸದಸ್ಯನಾ ? ಸಿದ್ದರಾಮಯ್ಯ ಇತ್ತೀಚಿಗೆ ಸಿ.ಟಿ ರವಿ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ಇಂದು ಸಿ.ಟಿ.ರವಿ ಸರಣಿ ಟ್ವೀಟ್ ಗಳ ಮೂಲಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಮಾನ್ಯ ಸಿದ್ದರಾಮಯ್ಯ ನವರೇ, ನಾನು ಆರ್ ಎಸ್ ಎಸ್ ಸಂಸ್ಥಾಪಕ ಅಲ್ಲ, ನಾನೊಬ್ಬ ಸಂಘದ ಸ್ವಯಂಸೇವಕ. ಪರಮ ಪೂಜ್ಯ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು ಗುರುವಾಗಿ ಸ್ವೀಕರಿಸಿದ್ದು ಸಹಸ್ರಾರು ವರ್ಷಗಳಿಂದ ಪ್ರೇರಣೆ ನೀಡಿದ ಭಗವದ್ ಧ್ವಜವನ್ನು ಮತ್ತು “ವ್ಯಕ್ತಿಗಿಂತ ತತ್ವ ಶ್ರೇಷ್ಠ” ಎಂಬ ಸಿದ್ದಾಂತವನ್ನು.
ಸಂಘ ಸ್ವಯಂಸೇವಕರಿಗೆ ಹೇಳಿಕೊಟ್ಟಿದ್ದು ದೇಶ ಮೊದಲು ಎನ್ನುವ ತತ್ವವನ್ನು. “ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ” ಎಂಬ ಭಾವವನ್ನು. ಇದು ಅರ್ಥವಾಗಬೇಕಾದರೆ, ಅಸ್ಪೃಶ್ಯತೆಯ, ಜಾತೀಯತೆಯ ಸೋಂಕಿಲ್ಲದೆ ನಾವೆಲ್ಲರೂ ಒಂದು, ಭಾರತಮಾತೆಯ ಮಕ್ಕಳು ಎಂದು ಬದುಕಬೇಕಾದರೆ ನೀವು ಶಾಖೆಗೆ ಬರಬೇಕು.
ನನ್ನ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತೆ : ವಾಟಾಳ್ ಗೆ ರೇಣುಕಾಚಾರ್ಯ ವಾರ್ನಿಂಗ್
ನಾನು ನಿಮ್ಮ ಹಾಗೆ, ನೀವು ಕಾಂಗ್ರೆಸ್ ಸಂಸ್ಥಾಪಕ ಎಓ ಹ್ಯೂಮ್ ರ ಮೊಮ್ಮಗನೋ, ಮರಿಮಗನೋ ಎಂದು ಕೇಳುವುದಿಲ್ಲ. ಇಂದಿರಾ ಗಾಂಧಿಯವರ ದತ್ತುಪುತ್ರ ಎಂದು ಹೇಳುವುದಿಲ್ಲ. ಅಧಿಕಾರಕ್ಕಾಗಿ ಪಕ್ಷ ಬದಲಾಯಿಸಿದರು ಎಂದು ಆರೋಪಿಸುವುದಿಲ್ಲ.
ಪಕ್ಷಕ್ಕಿಂತ ಸೋತವರು ದೊಡ್ಡವರಲ್ಲ : ರೇಣುಕಾಚಾರ್ಯ ಹೇಳಿಕೆ ಮರ್ಮವೇನು.?
ಬದಲಾಗಿ ವಂಶವಾದಕ್ಕಿಂತ, ಜಾತಿವಾದಕ್ಕಿಂತ, ರಾಷ್ಟ್ರವಾದ ದೇಶಕ್ಕೆ ಒಳ್ಳೆಯದು ಎಂದಷ್ಟೇ ಹೇಳಬಯಸುತ್ತೇನೆ.
ನೀವಿರುವ ಪಕ್ಷದಲ್ಲಿ ದೇಶಕ್ಕಿಂತ ಮತಬ್ಯಾಂಕ್ ಮುಖ್ಯವಾಗಿದೆ, ಪ್ರಜಾಪ್ರಭುತ್ವಕ್ಕಿಂತ ರಾಜಪ್ರಭುತ್ವದ ಮಾದರಿಯ ಕುಟುಂಬ ರಾಜಕಾರಣವಿದೆ. ದಾರಿತಪ್ಪಿರುವ ಕಾಂಗ್ರೆಸ್ಸಿಗರಿಗೆ ದೇಶಭಕ್ತಿಯ ಪಾಠ ಹೇಳಿಕೊಡಲು ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಮಹಾತ್ಮ ಗಾಂಧಿಯವರು ಬದುಕಿಲ್ಲ, ಕಾಂಗ್ರೆಸ್ ಅವರ ತತ್ವಕ್ಕೆ ನೆಹರು ಅವರ ಕಾಲದಲ್ಲಿಯೇ ಎಳ್ಳುನೀರು ಬಿಟ್ಟಾಗಿದೆ.
ದೇಶಭಕ್ತಿ ಸರಳವಾಗಿ ಅರ್ಥವಾಗಲು ಸಂಘದ ಶಾಖೆಗಿಂತ ಬೇರೆ ದಾರಿಯಿಲ್ಲ. ಅದಕ್ಕಾಗಿಯೇ ಸಾರ್ವಜನಿಕ ರೂಪದ ಸಂಪರ್ಕ ಮಾಡಿದ್ದೇನೆ.
ಇನ್ನೆಷ್ಟು ದಿನ ನಯವಂಚಕ, ಸ್ವಾರ್ಥದ ರಾಜಕಾರಣ? ನಿಮಗೆ ಬಿಟ್ಟಿದ್ದು ಎಂದು ಸಿ.ಟಿ.ರವಿ ಟೀಕಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










