ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalakar) ವಿರುದ್ಧ ಅಸಂವಿಧಾನಿಕ ಪದಬಳಕೆ ಆರೋಪದಲ್ಲಿ ಅರೆಸ್ಟ್ ಆಗಿ, ನ್ಯಾಯಾಲಯಕ್ಕೆ ಹಾಜರಾಗಿರುವ ವಿಪ ಸದಸ್ಯ ಸಿ.ಟಿ. ರವಿ ಕೋರ್ಟ್ ನಲ್ಲಿ ಕಣ್ಣೀರು ಸುರಿಸಿದ್ದಾರೆ.
ಸಿ.ಟಿ. ರವಿಯನ್ನು 5ನೇ ಸಿವಿಲ್ ಅಂಡ್ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕಲಂ 481 ಅಡಿ ವಕೀಲರು ಬೇಲ್‌ಗೆ ಅರ್ಜಿ ಸಲ್ಲಿಸಿದರು. ಈ ವೇಳೆ ಕೋರ್ಟ್‌ಹಾಲ್‌ನಲ್ಲಿ ಸಿ.ಟಿ ರವಿ (CT Ravi) ಕಣ್ಣೀರು ಹಾಕಿದ್ದಾರೆ. ನಂತರ ಆರ್. ಅಶೋಕ್, ಅಭಯ್ ಪಾಟೀಲ್ ಸಾಂತ್ವನ ಹೇಳಿದ ಪ್ರಸಂಗ ನಡೆಯಿತು. ನಂತರ ನ್ಯಾಯಾಧೀಶರಾದ ಸ್ಪರ್ಶಾ ಎಂ ಡಿಸೋಜಾ ಎದುರು ವಾದ ಮಂಡಿಸಿದ ಸಿ.ಟಿ ರವಿ ಪರ ವಕೀಲರಾದ ಎಂ.ಬಿ. ಜಿರಲಿ ಮತ್ತು ರವಿರಾಜ್ ಪಾಟೀಲ್ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡುವಂತೆ ಮನವಿ ಮಾಡಿದರು.
ಕಟಕಟೆಯಲ್ಲಿ ನಿಂತು ಉತ್ತರಿಸಿದ ಸಿ.ಟಿ ರವಿ, ಮೂರು ಜಿಲ್ಲೆಗಳಲ್ಲಿ ಸುತ್ತಾಡಿಸಿದ್ರು, ಗದಗ, ಧಾರವಾಡ, ಸವದತ್ತಿ, ರಾಮದುರ್ಗ ಸುತ್ತಾಡಿಸಿದ್ರು. ಖಾನಾಪುರ ಪೊಲೀಸರು ನನ್ನನ್ನು ಹೊಡೆದರು. ಕಬ್ಬಿನ ಗದ್ದೆಯಲ್ಲಿ ನಿಲ್ಲಿಸಿದ್ದರು. ಪೊಲೀಸರು ನನಗೆ ಮಾನಸಿಕ, ದೈಹಿಕವಾಗಿ ಹಿಂಸೆ ಕೊಟ್ಟಿದ್ದಾರೆ. ಮೊಬೈಲ್ ಜೊತೆಗೆ ವಾಚ್ ಕೂಡ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿ 10 ನಿಮಿಷಕ್ಕೆ ಪೊಲೀಸರಿಗೆ ಯಾರೋ ಫೋನ್ ಮಾಡ್ತಿದ್ರು. ಯಾವ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆ, ಅನ್ನೋ ಮಾಹಿತಿ ಕೂಡ ಕೊಡಲಿಲ್ಲ. ನನ್ನ ಕುಟುಂಬಕ್ಕೂ ಕೂಡ ಮಾಹಿತಿ ನೀಡಲಿಲ್ಲ ಎಂದು ಕಣ್ಣೀರು ಸುರಿಸಿದ್ದಾರೆ.
ಮೂರು ಬಾರಿ ನನ್ನ ಮೇಲೆ ಅಟ್ಯಾಕ್ ಆಯಿತು. ಝಿರೋ ಎಫ್‌ಐಆರ್ ಮಾಡಿ ಎಂದು ಕೇಳಿದೆ ಅದನ್ನು ಮಾಡಲಿಲ್ಲ. ಮಿನಿಸ್ಟರ್ ವಿರುದ್ಧ ಕೇಸ್ ಮಾಡದೇ ಇರುವುದು ಅಪರಾಧ. ಎರಡೂವರೆ ಗಂಟೆ ಯಾವ ನಾಯಕರನ್ನು ಒಳಗಡೆ ಬಿಟ್ಟಿಲ್ಲ ಎದು ಆರೋಪಿಸಿದ್ದಾರೆ.
ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಡಿಕೆ ಶಿವಕುಮಾರ್ ನಿನ್ನನ್ನ ನೋಡಿ ಕೊಳ್ಳುತ್ತೇನೆ ಅಂದ್ರು. ಇದೆಲ್ಲವನ್ನೂ ನೋಡಿ ನಾನು ರಾತ್ರಿಯಿಡಿ ಆತಂಕದಲ್ಲಿದ್ದೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ
ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...








