‘ CAA’ ಹೆಸರಲ್ಲಿ ರಾಜಕಾರಣ : ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದ್ರೆ ‘CAA’ ಜಾರಿ ಮಾಡಲ್ಲಾ : ರಾಹುಲ್ ಗಾಂಧಿ..!
ತೀವ್ರ ವಿವಾದಕ್ಕೆ ಕಾರuವಾಗಿ ತಿಂಗಳಾನುಗಟ್ಟಲೆ ಪ್ರತಿಭಟನೆ ನಡೆಸಿ, ಜನಾಕ್ರೋಶ ವ್ಯಕ್ತವಾಗಿದ್ದ ಸಿಎಎ ಕಾಯ್ದೆಗೆ ಹೆಚ್ಚು ಪ್ರತಿಭಟನೆ ನಡೆಸಿದ ರಾಜ್ಯ ಅಸ್ಸಾಂ. ಇದೀಗ ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಈ ಕಾಯ್ದೆ ಜಾರಿಗೆ ತರುವುದಿಲ್ಲ ಎಂದು ರಾಹುಲ್ ಗಾಂಧಿ ಪ್ರಚಾರದ ವೇಳೆ ಜನರಿಗೆ ಭರವಸೆ ನೀಡಿದ್ದಾರೆ. ಅಸ್ಸಾಂನಲ್ಲಿ ವಿದಾನಸಭಾ ಚುನಾವಣೆ ಸಮೀಪದಲ್ಲೇ ಇದ್ದು, ಕಾಂಗ್ರೆಸ್ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಪ್ರಚಾರದಲ್ಲಿ ಬ್ಯುಸಿಯಾಗಿವೆ.
ಅಸ್ಸಾಂ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಸಿಎಎ ಜಾರಿಗೊಳಿಸುವುದಿಲ್ಲ. ಅಸ್ಸಾಂ ಒಪ್ಪಂದದ ಅನುಸಾರ ಜನರ ಹಕ್ಕುಗಳನ್ನು ರಕ್ಷಿಸಲಾಗುವುದು’ ಎಂದು ಕಾಂಗ್ರೆಸ್‌ಮುಖಂಡ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಸ್ಸಾಂ ರಾಜ್ಯವನ್ನು ವಿಭಜನಗೊಳಿಸುತ್ತಿವೆ ಎಂದೂ ಭಾನುವಾರ ಆರೋಪಿಸಿದರು. ಮಾರ್ಚ್‌ಏಪ್ರಿಲ್ ತಿಂಗಳಲ್ಲಿ ಅಸ್ಸಾಂ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಚುನಾವಣೆಗೆ ಪೂರ್ವಭಾವಿಯಾಗಿ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯಕ್ಕೆ ದೆಹಲಿ ಅಥವಾ ನಾಗಪುರದ ನಿರ್ದೇಶನ ಪಾಲಿಸದ, ತನ್ನದೇ ಜನರ ಧ್ವನಿಯನ್ನು ಆಲಿಸುವ ಮುಖ್ಯಮಂತ್ರಿಯ ಅಗತ್ಯವಿದೆ’ ಎಂದರು.
ಅಸ್ಸಾಂ ಒಪ್ಪಂದ ರಾಜ್ಯವನ್ನು ರಕ್ಷಿಸಲಿದ್ದು, ಶಾಂತಿ ನೆಲೆಸಲು ಕಾರಣವಾಗಿದೆ. ನಾನು ಮತ್ತು ನನ್ನ ಪಕ್ಷದ ಕಾರ್ಯಕರ್ತರು ಇದನ್ನು ಉಳಿಸಲು ಕಾರ್ಯನಿರ್ವಹಿಸುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದರು.
ಅಸ್ಸಾಂ ಒಪ್ಪಂದವನ್ನು ಆಧಾರವಾಗಿಸಿ ರಾಜ್ಯವನ್ನು ವಿಭಜಿಸಲು ಆರ್‌ಎಸ್‌ಎಸ್ ಯತ್ನಿಸುತ್ತಿವೆ. ಅತಿಕ್ರಮವಾಗಿ ನುಸುಳುವಿಕೆ ರಾಜ್ಯದ ಸಮಸ್ಯೆಯಾಗಿದೆ. ರಾಜ್ಯದ ಜನರೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬದ್ಧರಾಗಿದ್ದಾರೆ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








