ಚಿಕ್ಕಮಗಳೂರು: ದುಷ್ಕರ್ಮಿಗಳು ಕ್ಯಾಬ್ ಡ್ರೈವರ್ ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಹುಲಿಗೊಂದಿ ಹೊಸೂರು ಗ್ರಾಮದ ಹತ್ತಿರ ನಡೆದಿದೆ. ಮಧುಗಿರಿ ತಾಲೂಕಿನ ದರ್ಶನ್(21) ಕೊಲೆಯಾಗಿರುವ ದುರ್ದೈವಿ. ಕೊಲೆಯಾದ ವ್ಯಕ್ತಿ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ, ಈ ವ್ಯಕ್ತಿ ಹಾಫ್ ಮರ್ಡರ್ ಕೇಸಿನಲ್ಲಿ ಜೈಲು ಸೇರಿದ್ದ. ಇತ್ತೀಚೆಗೆ ಬೇಲ್ ಪಡೆದು ಮಾಡಾಳು ಗ್ರಾಮದ ತಾತನ ಮನೆಗೆ ಬಂದಿದ್ದ.
ತಾತನಿಗೆ ಗೆಳೆಯರು ಬಂದಿದ್ದಾರೆ. ಹೊಲದ ಶೆಡ್ ನಲ್ಲಿ ಮಲಗುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಆದರೆ, ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿ ದರ್ಶನ್ ಮೃತ ದೇಹ ಪತ್ತೆಯಾಗಿದೆ. ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಆದರೆ, ಈ ಘಟನೆ ಯಾವ ವಿಚಾರಕ್ಕೆ ಯಾರು ಮಾಡಿದ್ದಾರೆ ಎಂಬುವುದು ತಿಳಿದಿಲ್ಲ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








