ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ, ಸಂಪುಟ ವಿಸ್ತರಣೆಗೆ ಮಾಡಿದ ವಿಳಂಬವನ್ನು ಖಾತೆ ಹಂಚಿಕೆಯಲ್ಲಿ ಮಾಡದೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಹೈಕಮಾಂಡ್ ನಾಯಕರ ಆದೇಶದ ಅನುಸಾರವಾಗಿ ಸಿಎಂ ಬಿಎಸ್ ವೈ ಖಾತೆ ಹಂಚಿಕೆ ಮಾಡಿದ್ದು, ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ, ಡಾ. ಕೆ ಸುಧಾಕರ್ ಅವರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ.
ಯಾರಿಗೆ ಯಾವ ಖಾತೆ?
ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ
ಬಿ.ಸಿ ಪಾಟೀಲ್ – ಅರಣ್ಯ ಖಾತೆ
ಶ್ರೀಮಂತ ಪಾಟೀಲ್ – ಜವಳಿ ಖಾತೆ
ನಾರಾಯಣ ಗೌಡ – ಪೌರಾಡಳಿತ, ತೋಟಗಾರಿಕೆ ಖಾತೆ
ಎಸ್.ಟಿ ಸೋಮಶೇಖರ್ – ಸಹಕಾರ ಖಾತೆ
ಆನಂದ್ ಸಿಂಗ್ – ಆಹಾರ ಮತ್ತು ನಾಗರಿಕ ಪೂರೈಕೆ
ಕೆ. ಗೋಪಾಲಯ್ಯ – ಸಣ್ಣ ಕೈಗಾರಿಕೆ
ಶಿವರಾಂ ಹೆಬ್ಬಾರ್- ಕಾರ್ಮಿಕ ಖಾತೆ
ಕೆ. ಸುಧಾಕರ್ – ವೈದ್ಯಕೀಯ ಶಿಕ್ಷಣ
ಬೈರತಿ ಬಸವರಾಜ್ – ನಗರಾಭಿವೃದ್ದಿ ಇಲಾಖೆ ಗಳನ್ನು ನೀಡಿ ಸಿಎಂ ಆದೇಶ ಹೊರಡಿಸಿದ್ದಾರೆ.