ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ (Cabinet Meeting) ನಡೆದಿದ್ದು, ಹಲವಾರು ವಿಚಾರಗಳ ಕುರಿತು ಚರ್ಚಿಸಲಾಯಿತು.
ಕೋವಿಡ್ (Covid) ಮಧ್ಯಂತರ ವರದಿ ಕರಿತು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದು ಗಂಭೀರ ಚರ್ಚೆಯಾಗಿದೆ. ಈ ವರದಿ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಹದಾಯಿ ಯೋಜನೆಗೆ (Mahadayi Project) ಅನುಮತಿಗೆ ವನ್ಯಜೀವಿಮಂಡಳಿ ಅನುಮೋದನೆ ನೀಡಿಲ್ಲ. ಆದರೆ ಗೋವಾದ ವಿದ್ಯುತ್ ಯೋಜನೆಗೆ ಅನುಮತಿ ನೀಡಲಾಗಿದೆ. ಹೀಗಾಗಿ ಸರ್ವಪಕ್ಷ ಸಭೆ ನಡೆಸಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಯಿತು.
ಅನ್ನಭಾಗ್ಯ ಯೋಜನೆಯಲ್ಲಿ ಅರ್ಧ ಕೆಜಿ ತೊಗರಿ, ಎಣ್ಣೆ, ಸಕ್ಕರೆ ಕೊಡುವ ಫುಡ್‌ಕಿಟ್ ಪ್ರಸ್ತಾವನೆ ಕೈಬಿಟ್ಟಿದ್ದು, ಯಥಾಸ್ಥಿತಿ ಹಣ ನೀಡುವ ಯೋಜನೆ ಮುಂದುವರೆಸಲು ತೀರ್ಮಾನ ಕೈಗೊಳ್ಳಲಾಗಿದೆ.