ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ..ಅಡಿಕೆಯಿಂದ ಚಾಕಲೇಟ್ ಉತ್ಪಾದಿಸಲು ಕ್ಯಾಂಪ್ಕೋ ಚಿಂತನೆ ! CAMPCO arecanut chocolate
ಮಂಗಳೂರು, ಡಿಸೆಂಬರ್17: ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. ಮುಂದಿನ ದಿನಗಳಲ್ಲಿ ಕ್ಯಾಂಪ್ಕೋ ಅಡಿಕೆಯಿಂದಲೇ ಚಾಕಲೇಟ್ ಉತ್ಪಾದಿಸುವ ಯೋಜನೆಯನ್ನು ಹಾಕಿಕೊಂಡಿದೆ. CAMPCO arecanut chocolate
ಅಡಿಕೆಯಿಂದ ಅಡಿಕೆ ಫ್ರೆಶ್ನರ್ ಅನ್ನು ಸಿದ್ಧಪಡಿಸುತ್ತಿರುವ ಕ್ಯಾಂಪ್ಕೋ ಇದೀಗ ಅಡಿಕೆಯ ಚಾಕಲೇಟ್ ಸಿದ್ಧಪಡಿಸುವ ಯೋಜನೆಯನ್ನು ಹಾಕಿಕೊಂಡಿದೆ. ಕೆಲವು ವರ್ಷಗಳ ಹಿಂದೆ ಕ್ಯಾಂಪ್ಕೋ ಅಡಿಕೆ ಸಿಪ್ಪೆಯಿಂದ ಮೌತ್ ಫ್ರೆಶ್ನರ್ ಅಭಿವೃದ್ಧಿಪಡಿಸಿದ್ದು, ಬಳಿಕ ಅಡಿಕೆಯಿಂದ ಮೌತ್ ಫ್ರೆಶ್ನರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ನುಂಗಬಹುದಾದ ಅಡಿಕೆ ಮೌತ್ ಫ್ರೆಶ್ನರ್‌ನ ನೈಸರ್ಗಿಕವಾಗಿ ತಯಾರಿಸಲಾಗಿದ್ದು, ಅಂತಿಮ ಪ್ರಕ್ರಿಯೆ ನಡೆಯುತ್ತಿದೆ.
ಇದೀಗ ಕ್ಯಾಂಪ್ಕೋ ಅಡಿಕೆಯಿಂದ ಚಾಕಲೇಟ್ ತಯಾರಿಸಲು ಮುಂದಾಗಿದ್ದು, ಈ ಬಗ್ಗೆ ಕಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ ಅವರು ಮಾಹಿತಿ ನೀಡಿದ್ದಾರೆ.
ಇಂಗ್ಲೆಂಡ್‌ನಲ್ಲಿ ಕೋವಿಡ್-19 ನ ಹೊಸ ರೂಪಾಂತರ ಪತ್ತೆ
ಅಡಿಕೆಯಿಂದ ಚಾಕಲೇಟ್ ಉತ್ಪಾದನೆ ಕ್ಯಾಂಪ್ಕೋದ ಹೊಸ ಪರಿಕಲ್ಪನೆಯಾಗಿದ್ದು, ಈಗಾಗಲೇ ಅಡಿಕೆಯಿಂದ ಹಲವಾರು ಟೀ, ಕಷಾಯ, ಲಡ್ಡು ಇತ್ಯಾದಿ ಮೌಲ್ಯವರ್ಧಿತ ಉತ್ಪನ್ನಗಳು ಬಿಡುಗಡೆಯಾಗುತ್ತಿದೆ. ಹೀಗಿರುವಾಗ ಅಡಿಕೆಯಿಂದ ಚಾಕಲೇಟ್ ಅನ್ನು ಕೂಡ ಯಾಕೆ ತಯಾರಿಸಬಾರದು ಎಂದು ಕ್ಯಾಂಪ್ಕೋ ಚಿಂತನೆ ನಡೆಸಿದೆ.
ಈ ಮೊದಲು ತಯಾರಿಸಿರುವ ಅಡಿಕೆ ಮೌತ್ ಫ್ರೆಶ್ನರ್ ನ ಮುಂದುವರಿದ ಭಾಗವಾಗಿ ಅಡಿಕೆ ಚಾಕಲೇಟ್ ಆವಿಷ್ಕಾರಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಆದರೆ ಇದು ಈಗ ಯಾವ ಹಂತದಲ್ಲಿದೆ ಎಂದು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಈ ವರ್ಷ ಅಡಿಕೆ ಕಿಲೋಗೆ 400 ರೂ ಗರಿಷ್ಠ ಧಾರಣೆಯನ್ನು ದಾಖಲಿಸಿ, ಬಳಿಕ ಇಳಿಮುಖವಾಗಿತ್ತು. ಈಗ ಪುನಃ ಧಾರಣೆಯಲ್ಲಿ ಚೇತರಿಕೆ ಕಾಣುತ್ತಿದ್ದು, ಅಡಿಕೆಯಿಂದ ಹೊಸ ಉತ್ಪನ್ನಗಳನ್ನು ತಯಾರಿಸುತ್ತಿರುವುದರಿಂದ ಅಡಿಕೆ ದರವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ಸೇವಿಸಬೇಕಾದ ಭಾರತೀಯ ಆಹಾರಗಳುhttps://t.co/y67YjE7rOw
— Saaksha TV (@SaakshaTv) December 15, 2020
ಮೊಬೈಲ್ ಚಾರ್ಜಿಂಗ್ ನಲ್ಲಿ ಇಡುವಾಗ ನೆನಪಿಡಬೇಕಾದ ಅಂಶಗಳುhttps://t.co/JUsVugINo3
— Saaksha TV (@SaakshaTv) December 15, 2020