ADVERTISEMENT
Friday, March 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮನರಂಜನೆ

ಚಿಕ್ಕಣ್ಣನ ಖಾಲಿ ಕುರ್ಚಿಗೆ ಟವಲ್ ಹಾಕಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ಹೊಸ ಉಪಾಧ್ಯಕ್ಷನ ದರ್ಬಾರ್

Can the Ghilli actor fill the role of Chikkanna?

Shwetha by Shwetha
January 31, 2026
in ಮನರಂಜನೆ, Cinema, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಂಡ ಮಂಡ್ಯದ ಗಿಲ್ಲಿ ನಟ ಈಗ ಬರೀ ರಿಯಾಲಿಟಿ ಶೋ ಸ್ಟಾರ್ ಅಲ್ಲ, ಗಾಂಧಿನಗರದ ಹೊಸ ಸೆನ್ಸೇಷನ್. ನೂರು ದಿನಗಳ ಕಾಲ ದೊಡ್ಮನೆಯಲ್ಲಿ ಮನರಂಜನೆಯ ಮಹಾಪೂರವನ್ನೇ ಹರಿಸಿದ ಗಿಲ್ಲಿ, ಈಗ ಬೆಳ್ಳಿಪರದೆಯ ಮೇಲೆ ನಗೆಯ ಸುನಾಮಿ ಎಬ್ಬಿಸಲು ಸಜ್ಜಾಗಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಕೇಳಿಬರುತ್ತಿರುವ ಬಿಸಿಬಿಸಿ ಚರ್ಚೆ ಏನಪ್ಪಾ ಅಂದ್ರೆ, ಹಾಸ್ಯನಟನಿಂದ ಹೀರೋ ಆಗಿ ಬಡ್ತಿ ಪಡೆದ ಚಿಕ್ಕಣ್ಣನ ಖಾಲಿ ಕುರ್ಚಿಯನ್ನು ಗಿಲ್ಲಿ ನಟ ಅಲಂಕರಿಸುತ್ತಾರಾ ಎಂಬುದು.

ಗೆದ್ದವನೇ ಗೆಲ್ಲುವ ಕುದುರೆ ಗಿಲ್ಲಿಗೆ ಹೆಚ್ಚಾಯ್ತು ಡಿಮ್ಯಾಂಡ್

Related posts

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

March 19, 2026
ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

March 19, 2026

ಬಿಗ್ ಬಾಸ್ ಗೆದ್ದ ಮೇಲೆ ಗಿಲ್ಲಿಯ ಭವಿಷ್ಯವೇ ಬದಲಾಗಿದೆ. ಹೋದಲ್ಲಿ ಬಂದಲ್ಲಿ ಜನ ಜೈಕಾರ ಹಾಕುತ್ತಿದ್ದಾರೆ. ಸೆಲ್ಫಿಗಾಗಿ ಮುಗಿಬೀಳುತ್ತಿದ್ದಾರೆ. ಈ ಜನಪ್ರಿಯತೆಯೇ ಈಗ ಗಿಲ್ಲಿಗೆ ಸಿನಿಮಾದಲ್ಲಿ ರೆಡ್ ಕಾರ್ಪೆಟ್ ವೆಲ್ಕಮ್ ಸಿಗುವಂತೆ ಮಾಡಿದೆ. ಗೌರಿ ಹಾಗೂ ದಿ ಡೆವಿಲ್ ನಂತಹ ದೊಡ್ಡ ಸಿನಿಮಾಗಳಲ್ಲಿ ಗಿಲ್ಲಿ ಈಗಾಗಲೇ ತಮ್ಮ ಕಾಮಿಡಿ ಕರಾಮತ್ತು ಪ್ರದರ್ಶಿಸಿದ್ದಾರೆ. ಕೈತುಂಬಾ ಆಫರ್ ಗಳು ಹುಡುಕಿಕೊಂಡು ಬರುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಪಕ್ಕಾ ಲೋಕಲ್ ಹಾಗೂ ನ್ಯಾಚುರಲ್ ಕಾಮಿಡಿಯನ್ ಸಿಕ್ಕಂತಾಗಿದೆ.

ಉಪಾಧ್ಯಕ್ಷನ ಪಟ್ಟಕ್ಕೆ ಗಿಲ್ಲಿಯೇ ಸೂಕ್ತ

ಕನ್ನಡ ಚಿತ್ರರಂಗದಲ್ಲಿ ಹೀರೋ ಪಕ್ಕ ನಿಂತು ಹೀರೋಯಿನ್ ಗಿಂತ ಹೆಚ್ಚು ಸ್ಕೋರ್ ಮಾಡುತ್ತಿದ್ದವರಲ್ಲಿ ಚಿಕ್ಕಣ್ಣ ಪ್ರಮುಖರು. ಅವರನ್ನು ಪ್ರೀತಿಯಿಂದ ಜನ ಉಪಾಧ್ಯಕ್ಷ ಅಂತಲೇ ಕರೆದರು. ಆದರೆ ಯಾವಾಗ ಉಪಾಧ್ಯಕ್ಷ ಚಿತ್ರದ ಮೂಲಕ ಚಿಕ್ಕಣ್ಣ ಹೀರೋ ಆದರೋ, ಸ್ಟಾರ್ ನಟರ ಪಕ್ಕದ ಆ ಕಾಮಿಡಿ ಜಾಗ ಖಾಲಿಯಾಯಿತು. ಅಷ್ಟೇ ಅಲ್ಲ, ಚಿಕ್ಕಣ್ಣ ಈಗ ಬ್ಯಾಕ್ ಟು ಬ್ಯಾಕ್ ಹೀರೋ ಆಗಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕನಿಗೆ ಸಾಥ್ ಕೊಡುವ, ಪಂಚಿಂಗ್ ಡೈಲಾಗ್ ಹೊಡೆಯುವ ಆ ಖಾಲಿ ಜಾಗವನ್ನು ತುಂಬಬಲ್ಲ ತಾಕತ್ತು ಇರೋದು ಸದ್ಯಕ್ಕೆ ಗಿಲ್ಲಿ ನಟನಿಗೆ ಮಾತ್ರ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.

ಕಾಮಿಡಿ ದಿಗ್ಗಜರ ಹಾದಿಯಲ್ಲಿ ಮಂಡ್ಯದ ಹೈದ

ಇತಿಹಾಸ ನೋಡೋದಾದ್ರೆ, ಕನ್ನಡದಲ್ಲಿ ಯಾರೆಲ್ಲಾ ಟಾಪ್ ಕಾಮಿಡಿಯನ್ ಆಗಿದ್ದರೋ ಅವರೆಲ್ಲಾ ಮುಂದೆ ಹೀರೋ ಆಗಿ ನೆಲೆಕಂಡುಕೊಂಡಿದ್ದಾರೆ. ಶರಣ್ ಅವರು ಕಾಮಿಡಿ ಕಿಂಗ್ ಆಗಿದ್ದವರು, ನೂರಾರು ಸಿನಿಮಾಗಳಲ್ಲಿ ನಗಿಸಿ ನಂತರ ಹೀರೋ ಆದರು. ಕೋಮಲ್ ಕೂಡ ಅದೇ ದಾರಿಯಲ್ಲಿ ಸಾಗಿದರು. ಇವರಿಬ್ಬರು ಬಿಟ್ಟ ಜಾಗವನ್ನು ಚಿಕ್ಕಣ್ಣ ಸಮರ್ಥವಾಗಿ ತುಂಬಿದರು. ಈಗ ಚಿಕ್ಕಣ್ಣ ಹೀರೋ ಆಗಿರೋದ್ರಿಂದ, ಆ ಜಾಗಕ್ಕೆ ಗಿಲ್ಲಿ ಬಂದಿದ್ದಾರೆ. ದರ್ಶನ್, ಸುದೀಪ್, ಯಶ್, ಶಿವಣ್ಣ ಸೇರಿದಂತೆ ಎಲ್ಲಾ ಸ್ಟಾರ್ ಗಳ ಜೊತೆ ಚಿಕ್ಕಣ್ಣ ಮಿಂಚಿದಂತೆ, ಮುಂದಿನ ದಿನಗಳಲ್ಲಿ ಗಿಲ್ಲಿ ಕೂಡ ಸ್ಟಾರ್ ಗಳ ಫೇವರಿಟ್ ಆಗುವ ಲಕ್ಷಣಗಳು ದಟ್ಟವಾಗಿವೆ.

ಬರೀ ನಟನಲ್ಲ ಸಕಲಕಲಾವಲ್ಲಭ ಈ ಗಿಲ್ಲಿ

ಗಿಲ್ಲಿ ಕೇವಲ ನಟನಲ್ಲ, ಆತನೊಬ್ಬ ಅದ್ಭುತ ರೈಟರ್ ಮತ್ತು ಡೈರೆಕ್ಟರ್ ಕೂಡ ಹೌದು. ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ನಲ್ಲಿ ಮೂಳೆ ಹಾಗೂ ರಾಂಗ್ ಸೈಡ್ ರಂಗನಾಥ ಸೀರೀಸ್ ಗಳೇ ಇದಕ್ಕೆ ಸಾಕ್ಷಿ. ತಾನೇ ಬರೆದು, ತಾನೇ ನಿರ್ದೇಶಿಸಿ ನಟಿಸುವ ಕಲೆ ಕರಗತ ಮಾಡಿಕೊಂಡಿರುವ ಗಿಲ್ಲಿಗೆ, ಕಾಮಿಡಿ ಟೈಮಿಂಗ್ ಅಂದ್ರೆ ಏನು ಅನ್ನೋದು ರಕ್ತಗತವಾಗಿದೆ. ಸ್ಕಿಟ್ ಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಆತ ಪ್ರೂವ್ ಮಾಡಿರೋ ಟ್ಯಾಲೆಂಟ್ ಈಗ ಬಿಗ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡಲಿದೆ.

ಒಟ್ಟಿನಲ್ಲಿ ಮಂಡ್ಯದ ಸೊಗಡಿನ ಮಾತಿನ ಮೂಲಕವೇ ಕನ್ನಡಿಗರ ಮನಗೆದ್ದಿರೋ ಗಿಲ್ಲಿ, ಸ್ಯಾಂಡಲ್ ವುಡ್ ನ ಮುಂದಿನ ಸ್ಟಾರ್ ಕಾಮಿಡಿಯನ್ ಆಗಿ ಹೊರಹೊಮ್ಮಲಿ, ಚಿಕ್ಕಣ್ಣನ ಸ್ಥಾನ ತುಂಬಿ ಪ್ರೇಕ್ಷಕರನ್ನ ನಗಿಸಲಿ ಅನ್ನೋದೇ ಅಭಿಮಾನಿಗಳ ಆಶಯ.

ShareTweetSendShare
Join us on:

Related Posts

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

by Shwetha
March 19, 2026
0

ಬೆಂಗಳೂರು: ರಾಜ್ಯದಲ್ಲಿ ಬದುಕಿರುವವರಿಗಷ್ಟೇ ಅಲ್ಲ, ಮೃತಪಟ್ಟವರಿಗೂ ಮಣ್ಣಾಗಲು ಜಾಗವಿಲ್ಲದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಲಭ್ಯವಿದ್ದ ಸರ್ಕಾರಿ ಜಮೀನ್ನೆಲ್ಲಾ ಇತರೆ ಉದ್ದೇಶಗಳಿಗೆ ಹಂಚಿಕೆ ಮಾಡಿ, ಇದೀಗ ಸ್ಮಶಾನಕ್ಕೆ ಜಾಗವಿಲ್ಲದೆ...

ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

by Shwetha
March 19, 2026
0

ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನೆರವು ಸಿಗುವ ಸಾಧ್ಯತೆ ಹೆಚ್ಚಿದೆ. ಕುಟುಂಬಸ್ಥರಿಂದ ವಿರೋಧ, ಬಹಿಷ್ಕಾರ ಮತ್ತು ಕೆಲ ಸಂದರ್ಭಗಳಲ್ಲಿ ಹಿಂಸೆ ಅಥವಾ ಕೊಲೆಗಳ ಘಟನೆಗಳ...

ನಟಿ ತಮನ್ನಾಗೆ 5 ಕೋಟಿ ನೀಡಲು ದುಡ್ಡಿದೆ ವಿಧವೆಯರಿಗೆ ವೇತನ ನೀಡಲು ಆಗಲ್ವಾ ಸರ್ಕಾರದ ವಿರುದ್ಧ ಶರಣು ಸಲಗಾರ್ ಆಕ್ರೋಶ

ನಟಿ ತಮನ್ನಾಗೆ 5 ಕೋಟಿ ನೀಡಲು ದುಡ್ಡಿದೆ ವಿಧವೆಯರಿಗೆ ವೇತನ ನೀಡಲು ಆಗಲ್ವಾ ಸರ್ಕಾರದ ವಿರುದ್ಧ ಶರಣು ಸಲಗಾರ್ ಆಕ್ರೋಶ

by Shwetha
March 19, 2026
0

ಬೆಳಗಾವಿ: ರಾಜ್ಯ ಸರ್ಕಾರದ ಆದ್ಯತೆಗಳು ಮತ್ತು ಅನುದಾನ ಹಂಚಿಕೆಯ ತಾರತಮ್ಯದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದ್ದು, ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗಾರ್ ಅವರು ಸರ್ಕಾರದ...

ಲೈಕ್ಸ್ ಆಸೆಗೆ ಅಪ್ಪನ ಪ್ರಾಣದ ಜತೆ ಆಟ ಪ್ರ್ಯಾಂಕ್ ಹೆಸರಲ್ಲಿ ವಿಕೃತಿ :ಬೆಂಗಳೂರಿನ ಕೊರಿಯರ್ ಆಫೀಸ್ ನಲ್ಲಿ ರೀಲ್ಸ್ ಹುಚ್ಚರ ಹೈಡ್ರಾಮಾ

ಲೈಕ್ಸ್ ಆಸೆಗೆ ಅಪ್ಪನ ಪ್ರಾಣದ ಜತೆ ಆಟ ಪ್ರ್ಯಾಂಕ್ ಹೆಸರಲ್ಲಿ ವಿಕೃತಿ :ಬೆಂಗಳೂರಿನ ಕೊರಿಯರ್ ಆಫೀಸ್ ನಲ್ಲಿ ರೀಲ್ಸ್ ಹುಚ್ಚರ ಹೈಡ್ರಾಮಾ

by Shwetha
March 19, 2026
0

ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಕಾಮೆಂಟ್ಸ್ ಗಿಟ್ಟಿಸಿಕೊಳ್ಳಲು ಇಂದಿನ ಯುವಪೀಳಿಗೆ ಯಾವ ಹಂತಕ್ಕೆ ಬೇಕಾದರೂ ಇಳಿಯಲು ಸಿದ್ಧರಿದ್ದಾರೆ ಎಂಬುದಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಂತಿದೆ....

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿಗೆ ₹104 ಕೋಟಿ ಬಿಡುಗಡೆ

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿಗೆ ₹104 ಕೋಟಿ ಬಿಡುಗಡೆ

by Shwetha
March 19, 2026
0

ರಾಜ್ಯ ಸರ್ಕಾರ 2026-27ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಹಾಗೂ ಪಾದರಕ್ಷೆಗಳನ್ನು ಒದಗಿಸಲು ₹104 ಕೋಟಿ ಬಿಡುಗಡೆ ಮಾಡಿದೆ. ಈ ಕುರಿತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram