ಅಫ್ಗಾನ್ ನಾಗರಿಕರ ಸ್ಥಳಾಂತರ ಕಾರ್ಯ ನಿಲ್ಲಿಸಿ – ಕೆನಡಾ
ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನಡುವೆ ಭಾರತ , ಅಮೆರಿಕಾ ಸೇರಿದಂತೆ ಅನೇಕ ದೇಶಗಳು ಅಫ್ಗಾನ್ ನಿಂದ ಜನರ ಸ್ಥಳಾಂತರ ಕಾರ್ಯದಲ್ಲಿ ತೊಡಗಿವೆ.. ಈ ನಡುವೆ ಕಾಬುಲ್ ಅಂತರಾಷ್ಟ್ರೀಯ ವಿಮಾನನ ನಿಲ್ದಾಣದಲ್ಲಿ ಸರಿಣಿ ಬಾಂಬ್ ಸ್ಫೋಟಗಳು ಸಂಭವಿಸಿ ಅಮೆರಿಕಾದ 13 ಸೈನಿಕರು , ನಾಗರಿಕರೂ ಸೇರಿದಂತೆ 73 ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ.. ಇನ್ನೂ ಆಗಸ್ಟ್ 31ರ ಗಡುವಿನ ಅಂತ್ಯದವರೆಗೆ ತಮ್ಮ ನಾಗರಿಕರನ್ನು ಅಫ್ಗನ್ ನಿಂದ ಸ್ಥಳಾಂತರ ಮಾಡಲು ವಿಶ್ವದ ಅನೇಕ ರಾಷ್ಟ್ರಗಳು ಪ್ರಯತ್ನ ನಡೆಸಿರುವ ಮಧ್ಯೆಯೇ ಕೆನಡಾ ತನ್ನ ಸ್ಥಳಾಂತರ ಕಾರ್ಯಚರಣೆಯನ್ನು ಅಂತ್ಯಗೊಳಿಸಿದೆ.
ಕಾಬುಲ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ – 13 ಅಮೆರಿಕಾ ಯೋಧರು ಸೇರಿ 72 ಸಾವು – ಸೇಡು ತೀರಿಸಿಕೊಳ್ಳುವುದಾಗಿ ಬೈಡೆನ್ ಪ್ರತಿಜ್ಞೆ..!
ಅಲ್ದೇ ಕೆನಡಾದ ರಕ್ಷಣಾ ಸಚಿವಾಲಯದ ಪ್ರತಿನಿಧಿ ಲೆಫ್ಟಿನೆಂಟ್ ಜನರಲ್ ವೇಯ್ನ್ ಐರ್ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ಥಳಾಂತರ ಕಾರ್ಯಾಚರಣೆಗೆ ಬ್ರೇಕ್ ಹಾಕುವಂತೆ ತಿಳಿಸಿದ್ದಾರೆ.. ಹತಾಶೆಯಿಂದ ದೇಶದಿಂದ ಹೊರ ಹೋಗುತ್ತಿರುವವರನ್ನು ರಕ್ಷಿಸಲು ನಾವು ಹೆಚ್ಚು ಹೊತ್ತು ಇರಬೇಕೆಂದು ಬಯಸುತ್ತೇವೆ. ಆದರೆ ಅದು ಸಾಧ್ಯವಿಲ್ಲ ಎಂಬುದು ಬೇಸರದ ಸಂಗತಿ. ಅಲ್ಲಿನ ಪರಿಸ್ಥಿತಿಗಳು ತೀರಾ ಹದಗೆಡುತ್ತಿವೆ ಎಂದು ತಿಳಿಸಿದ್ದಾರೆ.