ಬೆಂಗಳೂರು: ಅಂತಿಮ ವರ್ಷದ ಪರೀಕ್ಷೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಪದವಿ, ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ಕೋರ್ಸ್‍ಗಳ 1, 2, 3ನೇ ವರ್ಷದ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ.
ಆದರೆ, ಸೆಪ್ಟೆಂಬರ್‍ನಲ್ಲಿ ಡಿಪೆÇ್ಲಮಾ, ಇಂಜಿನಿಯರಿಂಗ್ ಹಾಗೂ ಪದವಿ ಕೋರ್ಸ್‍ಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಸದ್ಯಕ್ಕೆ ಪರೀಕ್ಷಾ ದಿನಾಂಕವನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ.
ಇದೇ ತಿಂಗಳ 30, 31ರಂದು ಮಾತ್ರ ಸಿಇಟಿ ಪರೀಕ್ಷೆ ನಡೆಯಲಿದ್ದು, ಯಾವುದೇ ಬದಲಾವಣೆ ಇಲ್ಲ ಎಂದು ಡಿಸಿಎಂ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಚಿಕ್ಕ ಮಕ್ಕಳು ಬರೆಯುವ ಎಸ್‍ಎಸ್‍ಎಲ್‍ಸಿ ಹಾಗೂ ಕೊನೆಯ ಇಂಗ್ಲಿಷ್ ಪರೀಕ್ಷೆಗಳನ್ನು ರದ್ದು ಮಾಡುವಂತೆ ಪೋಷಕರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರೂ ಕ್ಯಾರೇ ಎಂದಿರಲಿಲ್ಲ. ಆದರೆ, ಯುವಕರೇ ಹೋಗುವ ಡಿಗ್ರಿ ಪರೀಕ್ಷೆಗಳನ್ನು ರದ್ದು ಮಾಡಿರುವುದು ಎಷ್ಟು ಸರಿ ಎಂದು ವಿದ್ಯಾರ್ಥಿಗಳು ಪ್ರಶ್ನಿಸುವಂತಾಗಿದೆ.
ಖಾಸಗಿ ಹಾಗೂ ಸರ್ಕಾರಿ ವಿವಿಗಳಿಗೆ ಅನುಮತಿ
ಶೈಕ್ಷಣಿಕ ವರ್ಷದ ಪರೀಕ್ಷೆ ಮಾಡಲು ಖಾಸಗಿ ಹಾಗೂ ಸರ್ಕಾರಿ ವಿವಿಗಳಿಗೆ ಅವಕಾಶ ನೀಡಲಾಗಿದೆ. ಈ ಸೆಮಿಸ್ಟರ್
ನಲ್ಲಿ ಪರೀಕ್ಷೆ ಬರೆಯಲು ಆಗುವುದಿಲ್ಲ ಎನ್ನುವ ವಿದ್ಯಾರ್ಥಿಗಳಿಗೆ ಮುಂದೆ ಅವಕಾಶ ಕೊಡುತ್ತೇವೆ. ಪರೀಕ್ಷೆ ರದ್ದಾದ ವಿದ್ಯಾರ್ಥಿಗಳ ಇಂಟರ್ನಲ್ ಅಸೆಸ್‍ಮೆಂಟ್, ಹಿಂದನ ವರ್ಷಗಳ ಪರೀಕ್ಷೆ ಫಲಿತಾಂಶ ನೋಡಿ ಪ್ರಮೋಟ್ ಮಾಡಲಾಗುತ್ತದೆ.
ಎಲ್ಲಾ ಸಿಇಟಿ ಪರೀಕ್ಷೆ ಇರುತ್ತೆ
ಸಾಮಾನ್ಯ ಸಿಇಟಿ ಪರೀಕ್ಷೆ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸುಗಳ ಪರೀಕ್ಷೆ ನಿಗಧಿಯಂತೆ ನಡೆಯಲಿವೆ. ಪಿಜಿ ಸಿಇಟಿ ಪರೀಕ್ಷೆ ಆಗಸ್ಟ್ 8, 9ರಂದು ನಡೆದರೆ, ಡಿಪೆÇ್ಲಮಾ ಸಿಇಟಿ ಆಗಸ್ಟ್ 9ಕ್ಕೆ ನಡೆಯಲಿದೆ. ಸಿಇಟಿ ಪರೀಕ್ಷೆಗೂ ಸಹಾಯವಾಣಿ ತೆರೆದಿದ್ದೇವೆ ಎಂದು ಡಿಸಿಎಂ ತಿಳಿಸಿದ್ದಾರೆ.
ಸೆಪ್ಟೆಂಬರ್ ತಿಂಗಳ ಮೊದಲ ದಿನದಿಂದ ಅಕಾಡೆಮಿಕ್ ಕ್ಲಾಸ್ ಆರಂಭಿಸಲು ತೀರ್ಮಾನ ಮಾಡಲಾಗಿದೆ. ಸೆಪ್ಟೆಂಬರ್‍ನಲ್ಲಿ ಆನ್‍ಲೈನ್ ಕ್ಲಾಸ್ ಮತ್ತು ನವೆಂಬರ್‍ನಿಂದ ರೆಗ್ಯುಲರ್ ಕ್ಲಾಸ್‍ಗಳು ಶುರುವಾಗಲಿವೆ.








