ಎಂಎಸ್ಎಂಇ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಬೆಂಗಳೂರು, ಅಗಸ್ಟ್ 30: ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ) ತಂತ್ರಜ್ಞಾನ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
![]()
ಸೀನಿಯರ್ ಮ್ಯಾನೇಜರ್ (ಟ್ರೇನಿಂಗ್), ಮ್ಯಾನೇಜರ್- ಟೆಸ್ಟಿಂಗ್, ಮಾರ್ಕೆಟಿಂಗ್, ಅಸಿಸ್ಟೆಂಟ್ ಮ್ಯಾನೇಜರ್ (ಅಡ್ಮಿನ್ ಆಯಂಡ್ ಅಕೌಂಟ್ಸ್) ಸೀನಿಯರ್ ಇಂಜಿನಿಯರ್ – (ಡಿಸೈನ್) ಮೆಕಾನಿಕಲ್, ಸೀನಿಯರ್ ಇಂಜಿನಿಯರ್ (ಟ್ರೇನಿಂಗ್) ಎಲೆಕ್ಟ್ರಾನಿಕ್ಸ್, ಇಂಜಿನಿಯರ್ (ಪ್ರೊಡಕ್ಷನ್), ಇಂಜಿನಿಯರ್ (ಟ್ರೇನಿಂಗ್) (ಇಲೆಕ್ಟ್ರಾನಿಕ್ಸ್), ಅಕೌಂಟ್ಸ್ ಆಫೀಸರ್, ಸ್ಟೋರ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಪೇಕ್ಷಿತ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ/ ಪದವಿ ಪಾಸಾಗಿರಬೇಕು. ಕಾರ್ಯಾನುಭವ ಹೊಂದಿರಬೇಕು. ವಿದ್ಯಾರ್ಹತೆ,
ಇತ್ಯಾದಿ ವಿವರಗಳಿಗೆ ಎಂಎಸ್ಎಂಇ ಅಧಿಸೂಚನೆ ನೋಡಬಹುದು.

ಸೆಪ್ಟೆಂಬರ್ 20ರೊಳಗೆ www.idemi.org ಅಥವಾ www.msmetcblr.org ನಲ್ಲಿರುವ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ http://www.idemi.org ಸಂಪರ್ಕಿಸಬಹುದು.








