ವೈದ್ಯರ ಅನುಮತಿ ಪಡೆಯದೇ ದಿವ್ಯಾಂಗರಿಗೆ ವಿಮಾನ ಪ್ರವೇಶ ನಿರಾಕರಿಸುವಂತಿಲ್ಲ – DGCA
ಇಂಡಿಗೋ ಏರ್ಲೈನ್ಸ್ ವಿಮಾನದಿಂದ ದಿವ್ಯಾಂಗ ಮಗುವನ್ನು ಕೆಳಗೆ ಇಳಿಸಿದ ಸಂವೇದನಾಶೀಲ ಘಟನೆಯ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿಯಮಗಳನ್ನು ಬದಲಾಯಿಸಿದೆ. ವೈದ್ಯರ ಸಲಹೆ ಪಡೆಯದೆ ದಿವ್ಯಾಂಗರಿಗೆ ವಿಮಾನ ಪ್ರವೇಶ ನಿರಾಕರಿಸುವಂತಿಲ್ಲ ಮತ್ತು ಲಿಖಿತ ಮಾಹಿತಿ ನೀಡಬೇಕು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಶುಕ್ರವಾರ ಹೇಳಿದೆ.
ದಿವ್ಯಾಂಗ ವ್ಯಕ್ತಿಯ ಆರೋಗ್ಯವು ವಿಮಾನದಲ್ಲಿ ಪ್ರಯಾಣಿಸುವ ವೇಳೆ ಹದಗೆಡಬಹುದು ಎಂದು ವಿಮಾನಯಾನ ಸಂಸ್ಥೆ ಸಿಬ್ಬಂದಿಯ ಗಮನಕ್ಕೆ ಬಂದರೆ ವಿಮಾನ ನಿಲ್ದಾಣದ ವೈದರನ್ನು ಸಂಪರ್ಕಿಸಬೇಕು. ವೈದ್ಯರ ಸಲಹೆ ಮೇರೆಗೆ ವಿಮಾನ ಹತ್ತಿಸುವ ಅಥವಾ ನಿರಾಕರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ವಿಮಾನಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ಶುಕ್ರವಾರ ಹೇಳಿದೆ.
ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಬಾಲಕನಿಗೆ ವಿಮಾನ ಹತ್ತಲು ನಿರಾಕರಿಸಿದ್ದಕ್ಕೆ ಡಿಜಿಸಿಎ 5 ಲಕ್ಷ ರುಪಾಯಿಗಳ ದಂಡ ವಿಧಿಸಿತ್ತು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯನ್ನ ಉಂಟುಮಾಡಿತ್ತು.
Cannot deny entry to disabled persons without medical advice – DGCA








