Car accident – ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿರುವ ಇಂದು ಘಟನೆ ಚಿತ್ರದುರ್ಗ ತಾಲೂಕು ಚಿಕ್ಕಬೆನ್ನೂರು ಬಳಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಕಾರಣವೇನೆಂದು ಪರಿಷೀಲಿಸಿದಾಗ ನಾಯಿಯೊಂದು ಚಲಿಸುತ್ತಿರುವ ಕಾರಿಗೆ ಅಡ್ಡಲಾಗಿ ಬಂದಿರುವುದು ತಿಳಿದು ಬಂದಿದೆ .
ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ಗೆ ಹೋಗಿ ಅಪ್ಪಳಿಸಿದೆ . ಕಾರು ಗುದ್ದಿದ ರಭಸಕ್ಕೆ ಕಾರಿನಲ್ಲಿದ ಮಾನ್ಸಿ (40) ಹಾಗೂ ಉಜ್ವಲ್ ಬಾರ್ವಿ (44) ಎಂದಬುವವರು ಸ್ಥಳದಲ್ಲೆ ಮೃತ ಪಟ್ಟಿದ್ದಾರೆ.
ಮೃತರನ್ನು ಮಹಾರಾಷ್ಟ್ರ ಮೂಲದವರೆಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು ಇವರು ತಿರುಪತಿ ದರ್ಶನ ಮುಗಿಸಿ ವಾಪಸ್ ಮಹಾರಾಷ್ಟ್ರ ಕ್ಕೆ ತೆರಳುವಾಗ ಅಪಘಾತ ನಡೆದಿದೆ.
ಘಟನೆಯಲ್ಲಿ ಗಾಯಗೊಂಡಿದ ಗಾಯಾಳು ಸಚ್ಚಿನ್ ಬಾರ್ವಿ ಅವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ








