ಟ್ರಕ್ ಗೆ ಕಾರು ಡಿಕ್ಕಿ | ಮೂವರು ಸಾವು Car collision saaksha tv
ತೆಲಂಗಾಣ : ಮೇಡ್ಚಲ್ ಜಿಲ್ಲೆಯ ಬೌರಾಂಟೇಲ್ ಎಂಬಲ್ಲಿ ರಸ್ತೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ.
ಬೌರಾಂಪೇಟ್ ಬಳಿಯ ಕೊಕಾಕೋಲಾ ಕಂಪನಿ ನಿಲ್ಲಿಸಿದ್ದ ಟ್ರಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
ಗಾಯಾಳು ಅಶೋಕ್ ಎಂಬಾತನನ್ನು ಸುರಾರಾಂ ಮಲ್ಲಾರೆಡ್ಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಎಲ್ಲೂರಿನ ಸಂಜು ಮತ್ತು ಗಣೇಶ್ ಮತ್ತು ವಿಜಯವಾಡದ ಚರಣ್ ಎಂದು ಗುರುತಿಸಲಾಗಿದೆ.
ಮದ್ಯಸೇವಿಸಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.









