Chitradurga | ಕಾಡುಹಂದಿಗೆ ಕಾರು ಡಿಕ್ಕಿ: 3 ಸಾವು
ಚಿತ್ರದುರ್ಗ : ಕಾಡು ಹಂದಿಗೆ ಕಾರು ಡಿಕ್ಕಿ ಹೊಡೆದು ಮೂವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಐಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರವಿಚಂದ್ರ, ವಿಜಯ್ ಕುಮಾರ್ ಮೃತರಾಗಿದ್ದು, 59 ವರ್ಷದ ಮಹಿಳೆಯ ಹೆಸರು ಪತ್ತೆ ಆಗಿಲ್ಲ. ಕಾರಿನಲ್ಲಿ ಆರು ಮಂದಿ ಬೆಂಗಳೂರಿನಿಂದ ದಾವಣಗೆರೆ ದುರ್ಗದೇವಿ ಜಾತ್ರೆಗೆ ತೆರಳುತ್ತಿದ್ದರು.
ಈ ವೇಳೆ ಐಮಂಗಲದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕಾಡುಹಂದಿಗೆ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಕಾರು ಚಾಲನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ರೋಷರ್ ಜಮೀರ್, ವೃತ್ತ ನಿರೀಕ್ಷಕ ರಾಘವೇಂದ್ರ ಭೇಟಿ ಪರಿಶೀಲನೆ ನಡೆಸಿದ್ರು. ಅಪಘಾತ ಸಂಬಂಧ ಐಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Car collision with wild boar: 3 killed at Chitradurga









