ಹಿಂದೂ ಭಾವನೆಗೆ ಧಕ್ಕೆ – ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ವಿರುದ್ಧ ದೂರು ದಾಖಲು…
ಹಿಂದೂ ಭಾವನೆಗಳ ಧಕ್ಕೆ ತಂದ ಹಿನ್ನಲೆಯಲ್ಲಿ ತೆಲುಗು ಚಿತ್ರ ರಂಗದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೇವಿಶ್ರೀ ಇತ್ತೀಚೆಗಷ್ಟೇ ಟಿ-ಸೀರೀಸ್ ಭೂಷಣ್ ಕುಮಾರ್ ಅವರ ನಿರ್ಮಾಣದಲ್ಲಿ ‘ಓ ಪರಿ’ ಎಂಬ ಹಿಂದಿ ಆಲ್ಬಂ ಅನ್ನು ನಿರ್ಮಿಸಿ ಬಿಡುಗಡೆ ಮಾಡಿದರು. ಅದರ ಹಾಡಿನಲ್ಲಿ ‘ಹರೇ ರಾಮ ಹರೇ ಕೃಷ್ಣ’ ಮಂತ್ರವನ್ನ ಬಳಸಲಾಗಿದೆ ಎಂದು ದೂರು ನೀಡಲಾಗಿದೆ.
ಹರೇ ರಾ ಹರೇ ಕೃಷ್ಣ ಮಂತ್ರವನ್ನು ಅಶ್ಲೀಲ ವೇಷಭೂಷಣ ಮತ್ತು ನೃತ್ಯಗಳೊಂದಿಗೆ ಚಿತ್ರಿಸಲಾಗಿದೆ ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಂದೂ ಸಂಘಗಳು ಪೊಲೀಸರಿಗೆ ದೂರು ನೀಡಿದ್ದು, ಆ ಹಾಡಿನಲ್ಲಿರುವ ಮಂತ್ರವನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ದೇವಿಶ್ರೀ ಪ್ರಸಾದ್ ನಿರ್ದೇಶನಲ್ಲಿ ಬಿಡುಗಡೆಯಾಗದಿರುವ ಈ ಆಲ್ಬಂ ತೆಲುಗಿನಲ್ಲಿ ‘ಓ ಪಿಲ್ಲಾ’ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ. ಹಿಂದಿ ಆವೃತ್ತಿಯನ್ನು ರಣವೀರ್ ಸಿಂಗ್ ಬಿಡುಗಡೆ ಮಾಡಿದ್ದಾರೆ.
Case Against Tollywood Music Director Devi Sri Prasad for Hurting Hindu Sentiments