ಖ್ಯಾತ ಖಳನಟ ಸತ್ಯಜಿತ್ ವಿರುದ್ಧ ಸ್ವಂತ ಮಗಳಿಂದಲೇ ದೂರು ದಾಖಲು..!
ಕನ್ನಡದ ಖ್ಯಾತ ನಟ ಸತ್ಯಜಿತ್ ವಿರುದ್ಧ ಪುತ್ರಿಯೇ ಪೊಲೀಸ್ ಠಾಣೆಯಲ್ಲಿ ಮಾನಸಿಕ ಹಿಂಸೆ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ನಟ ಸತ್ಯಜಿತ್ ಪುತ್ರಿ ಅಖ್ತರ್ ಸ್ವಹಾನಾ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ತಂದೆ ಹಾಗೂ ಅಣ್ಣಂದಿರು ನನ್ನನ್ನು ಹಣಕ್ಕಾಗಿ ಪೀಡುತ್ತಿದ್ದಾರೆ. ನಾನು ಗರ್ಭಿಣಿ ಆಗಿದ್ದು ಈ ಸಮಯದಲ್ಲಿ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದ್ರೆ ಈ ಬಗ್ಗೆ ಸತ್ಯಜಿತ್ ಪುತ್ರ ಆಕಾಶ್ ಸತ್ಯಜಿತ್ ಸ್ಪಷ್ಟನೆ ನೀಡಿದ್ದು, ಅಪ್ಪ ಹಣಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ. ಆಕೆಯೇ ತಂದೆಯ ಮೇಲೆ ನಮ್ಮ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ. ಆಕೆಯ ಶಿಕ್ಷಣದ ಸಾಲ ತೀರಿಸಲು ನಮ್ಮ ತಂದೆ ಸುಮಾರು ಮನೆ ಮಾರಿ 50 ಲಕ್ಷ ಹಣ ಪಾವತಿಸಿದ್ದಾರೆ. ಆದರೆ ಈಗ ತುಸು ಸಹಾಯ ಕೇಳಿದ್ದಕ್ಕೆ ಆಕೆ ಅಪ್ಪನ ವಿರುದ್ಧ ತಿರುಗಿ ಬಿದ್ದಿದ್ದಾಳೆ, ಅಪ್ಪನ ವಿರುದ್ಧ ಸುಳ್ಳು ಕೇಸು ದಾಖಲಿಸಿ, ಈ ವಯಸ್ಸಿನಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿದ್ದಾರೆ ಎಂದಿದ್ದಾರೆ.
ನನ್ನ ಕೈಲಿ ಹಲವು ಕನ್ನಡ , ತಮಿಳು ಸಿನಿಮಾಗಳ ಪ್ರಾಜೆಕ್ಟ್ ಗಳಿವೆ – ಸಂಜನಾ ಗಲ್ರಾನಿ..!
ಅಪ್ಪನ ವಿರುದ್ಧ ಮಾಡಿಕೊಂಡು ಮದುವೆಯೂ ಮಾಡಿಕೊಂಡಿದ್ದಾಳೆ. ಈಗ ತನಗಾಗಿ ಮನೆ ತೆಗೆದುಕೊಂಡಿದ್ದಾಳೆ. ಆದರೆ ಆ ವಿಷಯವನ್ನು ಅಪ್ಪನಿಂದ ಮುಚ್ಚಿಟ್ಟಿದ್ದಳು ಇದು ಅಪ್ಪನಿಗೆ ಸಿಟ್ಟು ಬಂದು ಆಕೆಯನ್ನು ಮನೆಗೆ ಕರೆದು ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆ ದೂರು ನೀಡಿದ್ದಾಳೆ ಎಂದು ಆಕಾಶ್ ಹೇಳಿದ್ದಾರೆ. ಅಲ್ದೇ ಅಪ್ಪ ಕಾಲು ಕಳೆದುಕೊಂಡಾಗ ಅವರನ್ನು ಕಡೆಗಣಿಸಿದಳು. ಆಕೆಯ ಪತಿ ತೌಸಿಫ್ ತನ್ನನ್ನು ತಾನು ಆರ್ಕಿಟೆಕ್ಚರ್ ಎಂಜಿನಿಯರ್ ಎಂದು ಹೇಳಿಕೊಂಡಿದ್ದ. ಆದರೆ ಆತನೊಬ್ಬ ದೊಡ್ಡ ಫ್ರಾಡ್. ಮದುವೆ ಆದ ಹೊಸದರಲ್ಲಿ ಅಪ್ಪನೇ ಅವರ ಸಂಸಾರಕ್ಕೆ ಹಣ ಕೊಟ್ಟಿದ್ದಾರೆ. ಆ ನಂತರ ಅಪ್ಪನಿಗೆ ಗ್ಯಾಂಗ್ರಿನ್ ಸಮಸ್ಯೆ ಆಗಿ ಕಾಲು ಕಳೆದುಕೊಂಡಾಗ ಆಕೆ ಅಪ್ಪನನ್ನು ನೋಡಿಕೊಳ್ಳಲಿಲ್ಲ. ಇದೂ ಸಹ ಅಪ್ಪನಿಗೆ ವಿಷಾಧವಾಗಿ ಕಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ನಟ ಮಯೂರ್ ಪಟೇಲ್ ಗೆ ಜೀವ ಬೆದರಿಕೆ
ಆತ್ಮ ಸಂತೋಷಕ್ಕಾಗಿ ಹುಡುಗಿಯರ ಅಶ್ಲೀಲ ವಿಡಿಯೋ ಪಡೆಯುತ್ತಿದ್ದ ಅಪ್ರಾಪ್ತ ಬಾಲಕ..!
ಪ್ರೇಮಿಗಳ ದಿನ ಆಚರಿಸಿದ್ರೆ ಸ್ಥಳದಲ್ಲೇ ಮದುವೆ : ಹಿಂದೂ ಜಾಗೃತಿ ಸೇನೆ ವಾರ್ನಿಂಗ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








