ಗುಟ್ಕಾ ಜಾಹೀರಾತು ಎಫೆಕ್ಟ್ : ಬಾಲಿವುಡ್ ಸ್ಟಾರ್ಸ್ ಮೇಲೆ ಕೇಸ್
ಸೆಲೆಬ್ರಿಟಿಗಳನ್ನು ಅಭಿಮಾನಿಗಳು ನೆರಳಿನಂತೆ ಕಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಮಾಡಿದರೂ ಲೈಕ್ ಕಾಮೆಂಟ್ ಗಳ ಸುರಿಮಳೆ ಮಾಡುತ್ತಿದ್ದಾರೆ.
ಆದರೆ ನೆಚ್ಚಿನ ತಾರೆಯರು ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡರೇ, ನೀವು ಸಮುದಾಯಕ್ಕೆ ಯಾವ ಸಂದೇಶವನ್ನು ಕಳುಹಿಸಲು ಬಯಸುತ್ತೀರಿ ಎಂದು ಫೈರ್ ಆಗುತ್ತಾರೆ.
ಇತ್ತೀಚಿಗೆ ಬಾಲಿವುಡ್ ತಾರೆಯರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನೆಟ್ಟಿಗರು ಸಾಕಷ್ಟು ಆಕ್ರೋಶ ಹೊರಹಾಕಿದ್ದರು.

ಇದರೊಂದಿಗೆ ಅಕ್ಷಯ್ ಜಾಹೀರಾತಿಯಿಂದಾಗಿ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದರು.
ಆದರೆ, ಜಾಹೀರಾತು ವಿವಾದ ಇನ್ನೂ ಬಗೆಹರಿದಿಲ್ಲ. ಬಿಹಾರದ ಮುಜಾಫರ್‌ಪುರದ ಸಮಾಜಿಕ ಕಾರ್ಯಕರ್ತ ತಮನ್ನಾ ಹಶ್ಮಿ ಈಹೀರೋ ಮೇಲೆ ದೂರು ನೀಡಿದ್ದಾರೆ.
ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಅವರಂತಹ ಸ್ಟಾರ್ ಹೀರೋಗಳು ಹಣಕ್ಕಾಗಿ ಗುಟ್ಕಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾಲ್ವರು ಹೀರೋಗಳ ವಿರುದ್ಧ ಸೆಕ್ಷನ್ 467, 468, 439 ಮತ್ತು 120ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯವು ಮೇ 27 ರಂದು ಪ್ರಕರಣದ ವಿಚಾರಣೆ ನಡೆಸಲಿದೆ. case-filed-against-shah-rukh-khan-ajay-devgn








