ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಚರ್ಚೆಯ ಬಳಿಕ ನಾಳೆಯಿಂದ ಯಾವುದೇ ರೀತಿಯ ವಿನಾಯಿತಿ ನೀಡಬಾರದು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಉತ್ತರ ಪ್ರದೇಶ, ಕೇರಳದಲ್ಲಿ ಜಾರಿಗೆ ಬಂದಿರುವ ರೀತಿಯಲ್ಲಿಯೇ ಲಾಕ್ ಡೌನ್ ಜಾರಿಗೆ ಬರಲಿದೆ. ಲಾಕ್ ಡೌನ್ ಸಡಿಲಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು. ಇದೀಗ ಘಟನೆಯ ಬಳಿಕ ಸಡಿಲಿಕೆ ಚಿಂತನೆ ಕೈ ಬಿಟ್ಟಿದೆ. ರೆಡ್ ಜೋನ್ ವಲಯದಲ್ಲಿ ಮತ್ತಷ್ಟು ಬಿಗಿ ಭದ್ರತೆ ಕೈಗೊಳ್ಳಲಾಗುವುದು. ಕೇಂದ್ರದ ಮಾರ್ಗಸೂಚಿಯಂತೆ ಲಾಕ್ ಡೌನ್ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ. ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಮೇ 3 ರವರೆಗೂ ಕಟ್ಟು ನಿಟ್ಟಿನ ಲಾಕ್ ಡೌನ್ ನಡೆಸಲಾಗುವುದು. 3 ತಿಂಗಳು ಉಚಿತ ಸಿಲಿಂಡರ್ ನೀಡುವುದಾಗಿ ಘೋಷಣೆ ಮಾಡಿದರು. ಕೃಷಿ, ತೋಟಗಾರಿಕೆ ಕೆಲಸ ಎಂದಿನಂತೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಿ ಕ್ರಮಕೈಗೊಳ್ಳುತ್ತೇವೆ. ಕ್ವಾರಂಟೈನ್ ಮುರಿದು ಹಲ್ಲೆ ನಡೆಸಿದ್ರೆ ಕಠಿಣ ಕ್ರಮಕೈಗೊಳ್ಳುತ್ತೇವೆಂದು ಯಡಿಯೂರಪ್ಪ ತಿಳಿಸಿದರು. ಇದೆ ವೇಳೆಯಲ್ಲಿ ಟಿಪ್ಪು ಜಯಂತಿ ವೇಳೆ ರೈತರು ಸೇರಿದಂತೆ ಹಲವರ ವಿರುದ್ಧ ದಾಖಲಾಗಿದ್ದ ಕೇಸ್ ವಾಪಸ್ ಪಡೆದಿರುವುದಾಗಿ ಹೇಳಿದರು.