ಮೈಸೂರು : ಚಾಲಕರಿಗೆ 5000ರೂ ಕೋವಿಡ್-19 ಪರಿಹಾರ ದನ ಜಮೆಯಾದ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಬೆಳಕು ಸಂಸ್ಥೆಯ ವತಿಯಿಂದ ಮುಖ್ಯಂತ್ರಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದ 5 ಸಾವಿರ ರೂ. ಪರಿಹಾರ ಧನ ಮೊದಲ ಕಂತಿನಲ್ಲಿ ರಾಜ್ಯದ 40ಸಾವಿರ ಚಾಲಕರ ಖಾತೆಗೆ ಹಣ ತಲುಪಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಬೆಳಕು ಸಂಸ್ಥೆಯ ವತಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಚಾಲಕರಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂಧರ್ಭದಲ್ಲಿ ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಕೆ.ಎಂ. ನಿಶಾಂತ್ ರವರ ನೇತೃತ್ವದಲ್ಲಿ ಹತ್ತಾರು ಆಟೋ ಚಾಲಕರು ಸಿಹಿ ವಿತರಿಸಿ ಸಂಭ್ರಮಿಸಿದರು..








