ಜಾತಿ ಗಣತಿ | ಯಾರ್ಯಾರು ಎಷ್ಟಿದ್ದಾರೆ ಎಂಬುದು ನೋಡಬೇಕಲ್ಲವೇ
ಬೆಂಗಳೂರು : ಸ್ವಾತಂತ್ರ್ಯ ಬಂದು 74 ವರ್ಷ ಆಯಿತು. ಯಾರ್ಯಾರು ಎಷ್ಟಿದ್ದಾರೆ ಎಂಬುದು ನೋಡಬೇಕಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಜಾತಿ ಗಣತಿ ತಾರ್ಕಿಕ ಅಂತ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜಯಪ್ರಕಾಶ್ ಕೇವಲ ರಿಪೋರ್ಟ್ ಕೊಡುತ್ತಾರೆ.
ಆದರೆ ಸರ್ಕಾರ ಅದನ್ನ ಸ್ವೀಕರಿಸುವ ಕೆಲಸ ಮಾಡುತ್ತಿಲ್ಲ. ವರದಿ ಏನಿದೆ ಎಂಬುದು ನನಗೂ ತಿಳಿದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷ ಕಳೆದಿದೆ.
ಯಾರ್ಯಾರು ಎಷ್ಟಿದ್ದಾರೆ ಎಂಬುದು ನೋಡಬೇಕಲ್ಲವೇ? ಅದಕ್ಕಾಗಿ 160 ಕೋಟಿ ಖರ್ಚು ಮಾಡಿದ್ದೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ತುಂಬಾ ಕೆಲ್ಸ ಇದೆ, ಬೈ ಎಲೆಕ್ಷನ್ ಗೆ ಸ್ಪರ್ಧಿಸಲ್ಲ : ಸತೀಶ್ ಜಾರಕಿಹೊಳಿ
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವುದು ಬೇಡ.
ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎನ್ನುವುದು ಬಿಜೆಪಿ ನೀತಿ. ಜಾತಿ ಗಣತಿ ಸರ್ಕಾರ ಒಮ್ಮೆ ಪರಿಶಿಲನೆ ಮಾಡಲಿ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಒಡೆದ ಮನೆ ಎಂದು ರೇಣುಕಾಚಾರ್ಯ ಟೀಕಿಸಿದ ಬಗ್ಗೆ ಮಾತನಾಡಿ, ಬಿಜೆಪಿಯಲ್ಲಿ ಎಲ್ಲರೂ ಒಂದಾಗಿದ್ದಾರೆಯೇ..?
ಹಾಗಿದ್ದಲ್ಲಿ ಎರಡೆರೆಡು ಕಡೆ ಸಭೆ ನಡೆಸುವ ಅನಿವಾರ್ಯತೆ ಏನಿತ್ತು, ಇದನ್ನು ಬಹಳ ಗಟ್ಟಿಯಾದ ಮಡಿಕೆ ಅನ್ನಬೇಕಾ..?
ಒಂದು ಕಡೆ ಜಾರಕಿಹೊಳಿ ಮೀಟಿಂಗ್ ನಡೆಸಿದರೇ, ಮತ್ತೊಂದೆಡೆ ರೇಣುಕಾಚಾರ್ಯ ಸಭೆ ಸೇರಿದ್ದಾರೆ. ಇದು ಯಾರ ಮನೆ ಒಡೆದಿದೆ ಎಂಬುದನ್ನು ಸೂಚಿಸುತ್ತದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










