Shadab Khan: ನನ್ನಿಂದಾಗಿ ತಂಡ ಸೋತಿದೆ – ಕ್ಷಮಿಸಿ.. ಪಾಕ್ ಕ್ರಿಕೆಟಿಗ
ಭಾನುವಾರ ರಾತ್ರಿ ನಡೆದ ಏಷ್ಯಾಕಪ್ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧದ ಸೋತ ಪಾಕಿಸ್ತಾನ ಖಾಲಿ ಕೈಗಳೊಂದಿಗೆ ಮನೆಗೆ ಮರಳಿದೆ. ಶ್ರೀಲಂಕಾ ಯುವಪಡೆಯ ಅಬ್ಬರದ ಮುಂದೆ ಮ್ಯಾಚ್ ಒನ್ ಸೈಡ್ ಎಂದೆನಿಸಿತು. ಪಾಕಿಸ್ತಾದ ಬೌಲಿಂಗ್ ಸೆಡ್ಡು ಹೊಡೆದ ಶ್ರೀಲಂಕಾ ಏಷ್ಯಾಕಪ್ ಟೋಫ್ರಿಯನ್ನ ತಮ್ಮದಾಗಿಸಿಕೊಂಡಿದೆ.
ಇದರ ಜತೆಗೆ ಪಾಕಿಸ್ತಾನ ಫೀಲ್ಡಿಂಗ್ ನಲ್ಲಿ ಮಾಡಿದ ತಪ್ಪುಗಳು ಕೂಡ ತಂಡಕ್ಕೆ ಭಾರಿ ಪೆಟ್ಟು ನೀಡಿತು. ಶ್ರೀಲಂಕಾ ಗೆಲುವಿಗೆ ಪ್ರಮುಖ ಕಾರಣರಾದ ಭಾನುಕಾ ರಾಜಪಕ್ಸೆ ನೀಡದ್ದ ಕ್ಯಾಚ್ ಬಿಟ್ಟು ಜೀವದಾನ ನೀಡಿದ್ದ ಪಾಕ್ ಆಲ್ ರೌಂಡರ್ ಶಾದಾಬ್ ಖಾನ್ ಪಾಕ್ ಸೋಲಿಗೆ ಪರೋಕ್ಷವಾಗಿ ಕಾರಣರಾದರು. ಪಂದ್ಯದ ಕೊನೆಯಲ್ಲಿ.. ಆ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡ ಆಟಗಾರ ಸೋಲಿಗೆ ನಾನೇ ಹೊಣೆ ಎಂದು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡಕ್ಕೆ ಆರಂಭದಿಂದಲೇ ಸಂಕಷ್ಟ ಎದುರಾಯಿತು. ಪವರ್‌ಪ್ಲೇಯಲ್ಲಿ ಮೂರು ವಿಕೆಟ್‌ಗಳನ್ನ ಕಳೆದುಕೊಂಡಿತು. 58 ರನ್‌ಗಳಿಗೆ ಐದು ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡ 100 ರನ್ ಗಳಿಸುವುದು ಕೂಡ ಕಷ್ಟವಾಗಿತ್ತು. ಆದರೆ ಇನಿಂಗ್ಸ್ ಅಂತ್ಯದಲ್ಲಿ ಭಾನುಕಾ ರಾಜಪಕ್ಸೆ ಬಿರುಸಿನ ಬ್ಯಾಟಿಂಗ್ ಆಡಿ ಬೃಹತ್ ಮೊತ್ತ ಸೇರಿಸಿದರು.
ಡೆತ್ ಓವರ್‌ಗಳಲ್ಲಿ ಬೃಹತ್ ಸಿಕ್ಸರ್‌ಗಳನ್ನ ಸಿಡಿಸಿ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಸಮಯದಲ್ಲಿ ಎರಡು ಕ್ಯಾಚ್ ಬಿಟ್ಟು ಪಾಕ್ ಫೀಲ್ಡರ್ ಗಳು ಜೀವದಾನ ನೀಡಿದರು.
ಮೊಹಮ್ಮದ್ ಹಸ್ನೈನ್ ಮಾಡಿದ 19ನೇ ಓವರ್‌ನ ಕೊನೆಯ ಎಸೆತದಲ್ಲಿ ಭಾನುಕಾ ರಾಜಪಕ್ಸೆ ಮಿಡ್ ವಿಕೆಟ್ ಮೇಲೆ ಬಿಗ್ ಶಾಟ್ ಬಾರಿಸಿದರು. ಬೌಂಡರಿ ಗೆರೆಯಲ್ಲಿದ್ದ ಆಸಿಫ್ ಅಲಿ ಚೆಂಡನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಅದನ್ನು ಗಮನಿಸದ ಶಾದಾಬ್ ಕೂಡ ಅದೇ ಚೆಂಡನ್ನು ಹಿಡಿಯಲು ಓಡಿ ಬಂದರು. ಇಬ್ಬರೂ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ.
ಮುಂದಿನ ಓವರ್‌ನ ಕೊನೆಯ ಎಸೆತದಲ್ಲಿ ಭಾನುಕ ಮತ್ತೊಂದು ಸಿಕ್ಸರ್ ಬಾರಿಸಿ ತಂಡದ ಸ್ಕೋರ್ ಅನ್ನು 170 ರನ್‌ಗಳಿಗೆ ಕೊಂಡೊಯ್ದರು. ಇದಕ್ಕೂ ಮುನ್ನ ಶಾದಾಬ್ ಕ್ಯಾಚ್ ಕೈಬಿಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಶಾದಾಬ್ ಪಾಕಿಸ್ತಾನದ ಸೋಲಿನ ನೈತಿಕ ಹೊಣೆ ಹೊತ್ತುಕೊಂಡಿದ್ದಾರೆ.
“ಕ್ಯಾಚ್ ಗಳು ಪಂದ್ಯಗಳನ್ನು ಗೆಲ್ಲಿಸುತ್ತವೆ. ಕ್ಷಮಿಸಿ ತಂಡದ ಸೋಲಿಗೆ ನಾನೇ ಹೊಣೆ. “ನಾನು ತಂಡವನ್ನು ನಿರಾಸೆಗೊಳಿಸಿದೆ” ಎಂದು ಅವರು ವಿಷಾದಿಸಿದ್ದಾರೆ. ಮೊಹಮ್ಮದ್ ನವಾಜ್, ಹ್ಯಾರಿಸ್ ರವೂಫ್ ಮತ್ತು ನಸೀಮ್ ಶಾ ಅವರೊಂದಿಗೆ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊಹಮ್ಮದ್ ರಿಜ್ವಾನ್ ಅವರನ್ನು ಶಾದಾಬ್ ಹೊಗಳಿದರು. ವಿಜೇತ ಶ್ರೀಲಂಕಾ ತಂಡಕ್ಕೂ ಅಭಿನಂದನೆ ಸಲ್ಲಿಸಿದರು.








