ಜಮ್ಮು- ಕಾಶ್ಮೀರ: ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ Hizbul Terrorist) ಜಾವಿದ್ ಅಹ್ಮದ್ ಮಟ್ಟೂ (Javid Ahmed Mattoo) ಸಿಕ್ಕಿ ಬಿದ್ದಿದ್ದಾನೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ (Jammu-Kashmir) ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಈತನ ಪತ್ತೆಗೆ ಬಲೆ ಬೀಸಲಾಗಿತ್ತು. ದೆಹಲಿ ಪೊಲೀಸ್ ವಿಶೇಷ ದಳ ಇಂದು ಹಿಜ್ಬುಲ್ ಮುಜಾಹಿದ್ದೀನ್ ನನ್ನು ಬಂಧಿಸಸಿದ್ದಾರೆ. ಆರೋಪಿಯಿಂದ ಪಿಸ್ತೂಲ್, ಮ್ಯಾಗಜೀನ್ ಮತ್ತು ಕದ್ದ ಕಾರು ವಶಕ್ಕೆ ಪಡೆದಿದ್ದಾರೆ.
ಜಾವೇದ್ ಅಹ್ಮದ್ ಮಟ್ಟೂ ಬಂಧಿಸಿದರೆ 5 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಈತ ಹಲವು ಬಾರಿ ಪಾಕ್ ಗೆ ತೆರಳಿದ್ದ. ಸದ್ಯ ಈತನನ್ನು ಬಂಧಿಸಲಾಗಿದೆ.








