ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ : `ಕಾವೇರಿ’ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ
ಕಾವೇರಿ ತೀರ್ಥೋದ್ಭವಕ್ಕೆ ತಲಕಾವೇರಿ ಕ್ಷೇತ್ರವು ಸಜ್ಜಾಗಿದ್ದು, ಇಂದು ಮಧ್ಯಾಹ್ನ 1.11ಕ್ಕೆ ಕಾವೇರಿ ತೀರ್ಥರೂಪದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
ಸದ್ಯ ತಲಕಾವೇರಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಮುಂಜಾನೆಯಿಂದಲೇ ವಿವಿಧ ಹೋಮ ಹವನಗಳು ನಡೆಯುತ್ತಿವೆ.
ಸದ್ಯ ಮಹಾ ಸಂಕಲ್ಪ ಪೂಜೆ ನಡೆಯುತ್ತಿದ್ದು, ಮಳೆಯ ನಡುವೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದಾರೆ.
ಮಹಾಸಂಕಲ್ಪ ಅರ್ಚನೆ ಮುಗಿದ ಬಳಿಕ ಕುಂಡಿಕೆಯ ಪವಿತ್ರ ಜಲ ತನ್ನಷ್ಟಕ್ಕೆ ತಾನೇ ಬಹಳ ನಿಧಾನವಾಗಿ ಒಂದೆರಡು ಬಾರಿ ತೊಟ್ಟಿಲು ತೂಗಿದಂತೆ ಸ್ಪಂಧನಗೊಳ್ಳುತ್ತದೆ.
ಇದೇ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ದರ್ಶನ ಕೊಡುವ ಮುನ್ಸೂಚನೆಯಾಗಿದೆ.
ಕಾವೇರಿ ಕವೇರಮುನಿಯ ಮಗಳಾದ್ದರಿಂದ ಕಾವೇರಿ ಎಂಬ ಹೆಸರು ಬಂತು. ಕರ್ನಾಟಕದ ಕೊಡಗಿನಲ್ಲಿ ಹುಟ್ಟಿ ಕರುನಾಡನ್ನು ಹಸಿರಾಗಿಸುವ ಕಾವೇರಿ ಕಡುನಾಡಿನ ಜೀವನದಿ.
ಬ್ರಹ್ಮಗಿರಿಯಿಂದ ಇಳಿದು ಕೊಡಗಿನಲ್ಲಿ ಹರಿದು ಕರುನಾಡನ್ನು ಹಸಿರಾಗಿಸುತ್ತಿರೋ ಕಾವೇರಿ ಮಾತೆ. ಹಾಗಾಗಿ ದೇಶದ ನಾನಾಭಾಗಗಳ ಜನರು ತ್ರಿವೇಣಿ ಸಂಗಮದಲ್ಲಿ ಬಂದು ಪುಣ್ಯ ಸ್ನಾನಮಾಡುತ್ತಾರೆ.
ಕರುನಾಡಿನ ಜೀವನದಿಯಾದ ಕಾವೇರಿ ಕೋಟಿ ಕೋಟಿ ಜನರಪಾಲಿಗೆ ಜೀವಧಾತೆ ಅಷ್ಟೇ ಅಲ್ಲ, ಪರರ ಪಾಪ ತೊಳೆಯೋ ಪವಿತ್ರ ಮಾತ.
, ಹಾಗಾಗಿಯೇ ತುಲಾ ಸಂಕ್ರಮಣದ ಕಾಲದಲ್ಲಿ ಕಾವೇರಿಯ ಸಹೋದರಿ ಗಂಗೆ ಕಾವೇರಿಯೊಂದಿಗೆ ಸೇರಿ ತನ್ನ ಪಾಪವನ್ನು ಕಳೆದುಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ.
ಹಾಗಾಗಿ ಈ ತುಲಾ ಸಂಕ್ರಮಣದ ಕಾಲದಲ್ಲಿ ತಲಾಕಾವೇರಿಗೆ ಬಂದು ಭ್ರಹ್ಮಕುಂಡಿಕೆಯ ಬಳಿಯಿರುವ ಕಲ್ಯಾಣಿಯಲ್ಲಿ ಮಿಂದು ಕಾವೇರಿ ತೀರ್ಥ ಸ್ವೀಕಾರ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತೆ ಎಂಬುದು ಜನರ ನಂಬಿಕೆಯಾಗಿದೆ.
ಕರುನಾಡಿಗಷ್ಟೇ ಅಲ್ಲ ದಕ್ಷಿಣ ಗಂಗೆ ಎಂದು ಕರೆಸಿಕೊಳ್ಳೋ ಕಾವೇರಿ ದಕ್ಷಿಣ ಭಾರತದ ಕೋಟ್ಯಾಂತರ ಜನರ ಪಾಲಿಗೆ ಜೀವ ಜಲವಾಗಿ, ಪಾಪ ನಾಶಿನಿಯಾಗಿ ಭಕ್ತರನ್ನು ಹರಸುತ್ತಿದ್ದಾಳೆ…

ಕಾವೇರಿ ತೀರ್ಥರೂಪಿಣಿಯಾಗಿ ಆವಿರ್ಭವಿಸುವ ಕ್ಷಣಕ್ಕೆ ಎಲ್ಲರೂ ಕಾತುರರಾಗಿದ್ದಾರೆ. ಭಕ್ತರು ಜೈ ಜೈ ಮಾತೆ ಕಾವೇರಿ ಮಾತೆ ಹಾಗೂ ಗೋವಿಂದಾ ನಾಮ ಸ್ವರಣೆ ಮಾಡುತ್ತಾರೆ.
ಬಿಂದಿಗೆ, ಕ್ಯಾನ್ ಗಳಲ್ಲಿ ಪವಿತ್ರ ತೀರ್ಥವನ್ನು ಮನೆಗೆ ಕೊಂಡೊಯ್ಯಲು ಭಕ್ತರು ನೂಗುನುಗ್ಗಲಿನಲ್ಲಿ ನಿಲ್ಲುತ್ತಾರೆ.
ಈ ಬಾರಿ ಹಗಲಿನ ವೇಳೆ ತೀರ್ಥೋದ್ಭವ ವಾಗುತ್ತಿರುವುದರಿಂದ ಸಹಜವಾಗಿಯೇ ಭಕ್ತರ ಸಂಖ್ಯೆ ಹೆಜ್ಜಾಗಿ ತಲಕಾವೇರಿಯತ್ತ ಮುಖಮಾಡಿದೆ.
ತಲಕಾವೇರಿಗೆ ಆಗಮಿಸುವ ಪ್ರತಿಯೊಬ್ಬರೂ ಕೂಡ ಮೊದಲಿಗೆ ಬಾಗಮಂಡಲದಲ್ಲಿ ಭಗಂಢೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಕಾವೇರಿ ಮಾತೆಯ ದರ್ಶನ ಪಡೆಯುತ್ತಾರೆ.
ಕೊಡಗು ಜಿಲ್ಲಾಡಳಿತ ಹಾಗೂ ತಲಕಾವೇರಿ-ಭಾಗಮಂಡಲ ದೇವಾಲಯ ಸಮಿತಿ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕೊಡಗು ಜಿಲ್ಲಾ ಪೆÇಲೀಸ್ ಇಲಾಖೆ ವತಿಯಿಂದ ಕ್ಷೇತ್ರದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್, ಸಿಸಿ ಕ್ಯಾಮರಾ ಅಳವಡಿಗೆ, ಸ್ವಯಂ ಸೇವಕರ ಬಳಕೆ ಮಾಡಿಕೊಳ್ಳಲಾಗಿದೆ.
ಕೊವಿಡ್-19 ಹಿನ್ನೆಲೆ ತೀರ್ಥೋದ್ಭವ ವೇಳೆ ಕುಂಡಿಕೆಯ ಎದುರಿನ ಕೊಳದಲ್ಲಿ ಪುಣ್ಯಸ್ನಾನಕ್ಕೆ ಅವಕಾಶ ಇರುವುದಿಲ್ಲ.
ಭಕ್ತರಿಗೆ ಕೇವಲ ತೀರ್ಥ ವಿತರಣೆ ಮಾಡಲಾಗುವುದು. ತೀರ್ಥ ವಿತರಣೆಗೆ ಎಲ್ಲ ರೀತಿಯ ವಿಶೇಷ ವ್ಯವಸ್ಥೆ ಮಾಡಲಾಗಿದೆ. ತೀರ್ಥೋದ್ಭವ ವೇಳೆ 6 ಅರ್ಚಕರಿಂದ ಮಹಾಪೂಜೆ ನಡೆಯಲಿದೆ.








