ಲಂಚ ಪ್ರಕರಣ: ಜಾಮಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಖಾಲಿದ್ ಮೊಯಿನ್ ಅರೆಸ್ಟ್
ಕೇಂದ್ರೀಯ ತನಿಖಾ ದಳವು(CBI) ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಖಾಲಿದ್ ಮೊಯಿನ್ ಮತ್ತು ಇತರ ಇಬ್ಬರನ್ನು ಒಂದು ಲಕ್ಷ ರೂಪಾಯಿ ಲಂಚ ಪಡೆದ ಕಾರಣಕ್ಕೆ ಬಂಧಿಸಿದೆ.
ಲಂಚ ಪಡೆದು ಪ್ರಾಜೆಕ್ಟ್ಗಳಿಗೆ ಸ್ಟ್ರಕ್ಚರಲ್ ಸ್ಟೆಬಿಲಿಟಿ ಸರ್ಟಿಫಿಕೇಟ್ ನೀಡಲು ವಿವಿಧ ಖಾಸಗಿ ಬಿಲ್ಡರ್ಗಳು, ಆರ್ಕಿಟೆಕ್ಟ್ಗಳು, ಮಧ್ಯವರ್ತಿಗಳ ಪ್ರತಿನಿಧಿಗಳೊಂದಿಗೆ ಸಂಚು ರೂಪಿಸಿದ್ದರು ಮತ್ತು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಒಂದು ಲಕ್ಷ ರೂಪಾಯಿ ಲಂಚ ಕೊಡುತ್ತಿದ್ದಾಗ ಪ್ರೊಫೆಸರ್ ಮತ್ತು ಇತರ ಇಬ್ಬರನ್ನು ಸಿಬಿಐ ಬಲೆ ಬೀಸಿತು. ಆರೋಪಿಗಳ ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳನ್ನು ದೆಹಲಿಯ ನಿಯೋಜಿತ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
CBI arrests Jamia Milia Islamia University Professor Khalid Moin bribery case.