ಸಿಬಿಐ ಸಮನ್ಸ್ | ನನ್ನನ್ನು ಕಟ್ಟಿಹಾಕಲು ಬಿಜೆಪಿ ಪ್ರಯತ್ನ : ಡಿಕೆಶಿ
ಬಳ್ಳಾರಿ : ಪಕ್ಷ ಸಂಘಟನೆ ನನ್ನ ಪ್ರಮುಖ ಉದ್ದೇಶವಾಗಿದೆ. ಬಿಜೆಪಿಯವರು ಕಟ್ಟಿಹಾಕಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿಗೆ ಬಳ್ಳಾರಿ ಜಿಲ್ಲೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ಮಾಡಿದ್ರು.
ಇಂದು ಹೊಸಪೇಟೆಯಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಆಗಮಿಸಿದ ಡಿಕೆಶಿ, ಬಳ್ಳಾರಿ ಗಡಿಯ ಕಾನಾಹೊಸಳ್ಳಿ ಬಳಿ ಬಂದಾಗ, ಸ್ವಾಗತ ಕೋರಿದ್ರು.
ನಿಮ್ಮನ್ನು ಇಂದಿರಾ ಗಾಂಧಿ ಮೊಮ್ಮಗ ಎನ್ನಲ್ಲ : ಸಿದ್ದುಗೆ ಸಿ.ಟಿ.ರವಿ ಡಿಚ್ಚಿ
ಸ್ವಾಗತ ಕೋರಿದಾಗ ತೆರೆದ ವಾಹನದಲ್ಲಿ ಕಾರ್ಯಕರ್ತರತ್ತ ಕೈ ಬಿಸಿ, ಹೊಸಪೇಟೆ ಕಡೆ ಪ್ರಯಾಣ ಬೆಳೆಸಿದ್ರು.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಉಪಚುನಾವಣೆ ನಿಮಿತ್ತ ಪ್ರವಾಸ ಮಾಡುತ್ತಿದ್ದೆನೆ.
ಪಕ್ಷ ಸಂಘಟನೆ ನನ್ನ ಪ್ರಮುಖ ಉದ್ದೇಶವಾಗಿದೆ. ಆದರೆ ಮೊದಲಿಂದಲೂ ಬಿಜೆಪಿಯವರು ನನ್ನನ್ನು ಕಟ್ಟಿಹಾಕಲು, ಸಂಘಟನೆ ಮಾಡದಂತೆ ಮಾಡಲು ಪ್ರಯತ್ನಿಸ್ತಾರೆ. ಆದ್ದರಿಂದ ಸಿಬಿಐ ಯಿಂದ ಇಂತಹ ಕೆಲಸ ಮಾಡ್ತಾರೆ ಮಾಡ್ಲಿ ಬಿಡಿ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










