ಮಗಳ ನಿಶ್ಚಿತಾರ್ಥ ದಿನವೇ ನೋಟಿಸ್ ಕೊಟ್ಟಿದ್ದಾರೆ.. ತಕ್ಕ ಉತ್ತರ ಕೊಡ್ತೇನೆ : ಡಿಕೆಶಿ
ಕಲಬುರಗಿ : ನನ್ನ ಮಗಳ ನಿಶ್ಚಿತಾರ್ಥ ದಿನವೇ ನನ್ನ ಮನೆಗೆ ಬಂದು ನೋಟಿಸ್ ಕೊಟ್ಟಿದ್ದಾರೆ. ಸಾಮಾನ್ಯ ನಾಗರಿಕನಾಗಿ ಕಾನೂನಿನ ಚೌಕಟ್ಟಿನಲ್ಲೆ ಉತ್ತರ ಕೊಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಸಿಬಿಐ ನೋಟಿಸ್ ಕೊಟ್ಟಿರುವ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನ್ನ ಮಗಳ ಎಂಗೆಜ್ಮೆಂಟ್ ಇದ್ದಾಗ ಮನೆಗೆ ಬಂದು ನೋಟಿಸ್ ಕೊಡ್ತಾರೆ, ನಾಳೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗೋಕೆ ಹೋಗುತ್ತಿದ್ದೇನೆ.
ನಮ್ಮ ಪಕ್ಷದ ಕಾರ್ಯಕರ್ತರು ಯಾರು ಸಿಬಿಐ ಆಫೀಸ್ ಗೆ ಬರಬಾರದು. ಯಾರು ಕೂಡ ನನ್ನ ಬಗ್ಗೆ ಯಾವುದೇ ಹೇಳಿಕೆ ಕೊಡಬಾರದು. ರಾಜಕೀಯ ದ್ವೇಷ ಉಕ್ಕಿ ಹರಿಯುತ್ತಿದೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕರ್ನಾಟಕ ರಾಜ್ಯಸಭಾ ಸ್ಥಾನಕ್ಕೆ ಆರ್ಎಸ್ಎಸ್ ಕಾರ್ಯಕರ್ತ ಕೆ.ನಾರಾಯಣ್ ಅವಿರೋಧವಾಗಿ ಆಯ್ಕೆ
ಇನ್ನು ಸಾಮಾನ್ಯ ನಾಗರಿಕನಾಗಿ ಕಾನೂನಿನ ಚೌಕಟ್ಟಿನಲ್ಲೆ ಉತ್ತರ ಕೊಡುತ್ತೇನೆ. ಯಾವ ಶಾಸಕರ ಮೇಲು ಸಿಬಿಐ ತನಿಖೆಗೆ ಕೊಟ್ಟಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಡಿ.ಕೆ.ಶಿವಕುಮಾರ್,
ಸದ್ಯ ಎಲ್ಲಾ ಶಾಸಕರುಗಳ ಅಫಿಡಿವೆಟ್ ತೆಗೆದುಕೊಳ್ತಾರೆ ಯಾರ ಆಸ್ತಿಯು ಹೆಚ್ಚಾಗಿಲ್ವಾ..? ಅವರು ಯಾರನ್ನು ಕೂಡ ಸಿಬಿಐ ತನಿಖೆ ಮಾಡೋದಕ್ಕೆ ಮುಂದಾಗಿಲ್ಲ ಎಂದು ಕಿಡಿಕಾರಿದರು.
ಮುಂದುವರಿದು ಮಗಳ ನಿಶ್ಚಿತಾರ್ಥ ದಿನ ಮನೆಯ ಬಾಗಿಲಿಗೆ ಬಂದು ನೋಟಿಸ್ ಕೊಡುತ್ತಾರೆ. ಒಂದು ವರ್ಷದಿಂದ ಸುಮ್ಮನಿದ್ದು ಮನೆಯ ಕಾರ್ಯಕ್ರಮ ಇದ್ದಾಗಲೇ ಬರಬೇಕಾ ಎಂದು ಪ್ರಶ್ನೆ ಮಾಡಿದ ಡಿಕೆಶಿ, ನನ್ನ ಮೇಲೆ ಎಫ್ ಐಆರ್ ಹಾಕಿದ್ದೆ ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.
ಇದೇ ವೇಳೆ ಸಿಎಂ ಬಿಎಸ್ ವೈ ವಿರುದ್ಧ ಗುಡುಗಿದ ಡಿಕೆಶಿ, ಯಡಿಯೂರಪ್ಪ ಈ ಹಂತಕ್ಕೆ ಇಳೀತಾರೆ ಅಂತಾ ಅಂದುಕೊಂಡಿರಲಿಲ್ಲ. ರಾಜಕಾರಣ ನೊಂದವರಿಗೆ ಸಹಾಯ ಮಾಡುವಂತಿರಬೇಕು ಎಂದು ಕುಟುಕಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel