CBSE 10 , 12 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ
ನವದೆಹಲಿ : CBSE 10 , 12 ನೇ ತರಗತಿ ಪರೀಕ್ಷಾ ವೇಳಾಪಟ್ಟಿಯು ಪ್ರಕಟವಾಗಿದೆ. ಹೌದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ 10, 12 ನೇ ತರಗತಿಯ ಟರ್ಮ್ -1 ಪರೀಕ್ಷೆಯನ್ನ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ನಡೆಸಲು ಯೋಜಿಸಲಾಗಿದೆ.
ಇದೇ ಮೊದಲ ಬಾರಿಗೆ CBSE 10 ನೇ ತರಗತಿ ಮತ್ತು 12 ನೇ ತರಗತಿಯ ಪರೀಕ್ಷೆಯು ವರ್ಷದಲ್ಲಿ 2 ಬಾರಿ ನಡೆಯಲಿದೆ. 10 ನೇ ತರಗತಿ ಮತ್ತು 12 ನೇ ತರಗತಿಯ ಟರ್ಮ್ -1 ಪರೀಕ್ಷೆಯಲ್ಲಿ, 50 ಶೇಕಡಾ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ವರದಿಯಾಗಿದೆ. cbse.nic.in ವೆಬ್ ಸೈಟ್ ಮೂಲಕ ವಿದ್ಯಾರ್ಥಿಗಳು ಡೇಟಾ ಶೀಟ್ ಪಡೆಯಬಹುದಾಗಿದೆ.
10 ನೇ ತರಗತಿಗೆ ಪರೀಕ್ಷೆ ದಿನಾಂಕ – ವಿಷಯ
ನವೆಂಬರ್ 30 – ಸಮಾಜ ವಿಜ್ಞಾನ
ಡಿಸೆಂಬರ್ 2 – ವಿಜ್ಞಾನ
ಡಿಸೆಂಬರ್ 3 – ಹೋಮ್ ಸೈನ್ಸ್
ಡಿಸೆಂಬರ್ 4 – ಗಣಿತ
ಡಿಸೆಂಬರ್ 8 – ಕಂಪ್ಯೂಟರ್ ಅಪ್ಲಿಕೇಷನ್
ಡಿಸೆಂಬರ್ 9 –ಹಿಂದಿ ಕೋರ್ಸ್ ಎ , ಕೋರ್ಸ್ ಬಿ
ಡಿಸೆಂಬರ್ 11 – ಇಂಗ್ಲಿಷ್
12ನೇ ತರಗತಿಗೆ ಪರೀಕ್ಷಾ ದಿನಾಂಕ – ವಿಷಯ
ಡಿಸೆಂಬರ್ 1 – ಸಮಾಜಶಾಸ್ತ್ರ
ಡಿಸೆಂಬರ್ 3 – ಇಂಗ್ಲಿಷ್
ಡಿಸೆಂಬರ್ 6 – ಗಣಿತ
ಡಿಸೆಂಬರ್ 7 – ದೈಹಿಕ ಶಿಕ್ಷಣ
ಡಿಸೆಂಬರ್ 9 – ಭೂಗೋಳಶಾಸ್ತ್ರ
ಡಿಸೆಂಬರ್ 10 – ಭೌತಶಾಸ್ತ್ರ
ಡಿಸೆಂಬರ್ 11 – ಮನೋವಿಜ್ಞಾನ
ಡಿಸೆಂಬರ್ 13 – ಅಕೌಂಟೆನ್ಸಿ
ಡಿಸೆಂಬರ್ 14 – ರಸಾಯನಶಾಸ್ತ್ರ
ಡಿಸೆಂಬರ್ 15 – ಅರ್ಥಶಾಸ್ತ್ರ
ಡಿಸೆಂಬರ್ 16 – ಹಿಂದಿ
ಡಿಸೆಂಬರ್ 17 – ರಾಜಕೀಯ ವಿಜ್ಞಾನ
ಡಿಸೆಂಬರ್ 18 – ಜೀವಶಾಸ್ತ್ರ
ಡಿಸೆಂಬರ್ 21 – ಇನ್ಫಾರ್ಮೆಟಿಕ್ಸ್ ಪ್ರಾಕ್ಟಿಕಲ್ , ಕಂಪ್ಯೂಟರ್ ಸೈನ್ಸ್
ಡಿಸೆಂಬರ್ 22 – ಹೋಮ್ ಸೈನ್ಸ್
ಎಲ್ಲಾ ಪರೀಕ್ಷೆಗಳೂ 11 ಗಂಟೆಗೆ ಶುರುವಾಗಿ 1 ಗಂಟೆಗೆ ಮುಕ್ತಾಯಗೊಳ್ಳುತ್ತದೆ ಎಂದು ವರದಿಯಾಗಿದೆ.