ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತುಪ್ಪದ ಬೆಡಗಿ ರಾಗಿಣಿ ನಂತರ, ಕಿರಿಕ್ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇಂದು ಬೆಳಿಗ್ಗೆ ಸಂಜನಾ ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರ ಟೀಂ, ಸಂಜನಾಳನ್ನು ವಶಕ್ಕೆ ಪಡೆದು ಕೆಲ ದಾಖಲೆಗಳನ್ನು ಜಪ್ತಿ ಮಾಡಿತ್ತು. ನಂತರ ಸಂಜನಾಳನ್ನು ಸಿಸಿಬಿ ಕಚೇರಿಗೆ ಕರೆತಂದ ಸಿಸಿಬಿ ಪೊಲೀಸರು, ಸತತ 3 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿದ್ದಾರೆ.
ಡ್ರಗ್ಸ್ ಜಾಲಕ್ಕೂ, ಡ್ರಗ್ಸ್ ಪೆಡ್ಲರ್ ಗಳ ಜೊತೆಗೂ ನಿಮಗೂ ಇರುವ ಸಂಬಂಧವೇನು, ನಿಮ್ಮ ಜತೆ ಎಷ್ಟು ಮಂದಿ ಸಂಪರ್ಕದಲ್ಲಿದ್ದಾರೆ ? ನೀವು ಡ್ರಗ್ಸ್ ತೆಗೆದುಕೊಳ್ಳುತ್ತೀರಾ ಸೇರಿದಂತೆ 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಂಜನಾ ಗಲ್ರಾನಿಗೆ ಕೇಳಿದ್ದಾರೆ.
ಮೊದ ಮೊದಲು ನನಗೇನೂ ಗೊತ್ತಿಲ್ಲ ಎಂದು ಕಣ್ಣೀರು ಹಾಕಿ ಕಿರುಚಾಡಿದ ನಟಿ ಸಂಜನಾ, ಡ್ರಗ್ಸ್ ಜಾಲದ ಜೊತೆಗಿನ ತಮ್ಮ ಸಂಬಂಧದ ಕುರಿತಂತೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಿದ್ದಂತೆ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ.
ಸಂಜನಾ ಗಲ್ರಾನಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು, ವೈದ್ಯಕೀಯ ಪರೀಕ್ಷೆ ನಡೆಸಲು ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಸಿಸಿಬಿ ಕಚೇರಿಗೆ ಕರೆತಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ.
ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಸಂಜನಾ ಗಲ್ರಾನಿಯನ್ನ ತಮ್ಮ ಕಸ್ಟಡಿಗೆ ನೀಡುವಂತೆ ಸಿಸಿಬಿ ಪೊಲೀಸರು ಮನವಿ ಮಾಡಲಿದ್ದಾರೆ. ಪ್ರಕರಣದ ಗಂಭೀರತೆ ಆಧರಿಸಿ ನ್ಯಾಯಾಧೀಶರು ಸಂಜನಾಳನ್ನು ಎಷ್ಟು ದಿನ ಸಿಸಿಬಿ ಕಸ್ಟಡಿಗೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಚಿನ್ನ ಪ್ರಿಯರಿಗೆ ಬಂಪರ್ : 6000ರೂ ಕುಸಿತ ಖರೀದಿಸಲು ಇದು ಒಳ್ಳೆಯ ಸಮಯ
ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ವಿಶೇಷವಾಗಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 6,000 ರೂಪಾಯಿ ಕಡಿಮೆಯಾಗಿದೆ. ಇದರಿಂದಾಗಿ ಚಿನ್ನ ಖರೀದಿಸಲು...