ಎಸ್‍ಐಟಿ ತನಿಖೆ ವಿಷಯದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ : ಗೃಹ ಸಚಿವ
ಬಸವಕಲ್ಯಾಣ : ರಮೇಶ್ ಜಾರಕಿಹೊಳಿಯನ್ನು ವಶಕ್ಕೆ ಪಡೆಯಬೇಕೋ ಬೇಡವೋ ಎಂಬುದನ್ನು ಎಸ್ ಐಟಿ ನಿರ್ಧರಿಸುತ್ತದೆ.
ಕಾನೂನು ಮತ್ತು ಗೃಹ ಸಚಿವನಾದರೂ ಎಸ್ ಐಟಿ ತನಿಖೆ ವಿಷಯದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಸ್ ಐಟಿ ತನ್ಮ ಕೆಲಸ ಮಾಡುತ್ತಿದೆ.
ಅಧಿಕಾರಿಗಳಿಗೆ ಪೂರ್ಣಸ್ವಾತಂತ್ರ್ಯ ಕೊಟ್ಟಿದ್ದೇವೆ. ಕಾನೂನಿನ ಪ್ರಕಾರವೇ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಂಗ್ರೆಸ್ ಅನಗತ್ಯ ಟೀಕೆ ಪ್ರತಿಭಟನೆ ಟ್ವಿಟ್ ಮಾಡಿ ಗೊಂದಲ ಸೃಷ್ಟಿಸುತ್ತಿದೆ. ಮೇಟಿ ಪ್ರಕರಣದಲ್ಲಿ ಕನಿಷ್ಠ ಎಫ್ ಐಆರ್ ಕೂಡ ಹಾಕಿರಲಿಲ್ಲ.
ಪ್ರತಿಭಟನೆ,ಟ್ವಿಟ್,ಟೀಕೆಗಳು ಯಾವುದೂ ಎಸ್ ಐಟಿ ತನಿಖೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಹೇಳಿದರು.
ಇನ್ನು ಉಪಚುನಾವಣೆ ಬಗ್ಗೆ ಮಾತನಾಡಿ, ಬಸವಕಲ್ಯಾಣ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಶರಣು ಸಲಗಾರ ನಿಶ್ಚಿತವಾಗಿ 20,000ಕ್ಕು ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ.
ಖೂಬಾ ನಮ್ಮ ಸ್ನೇಹಿತರೆ,ಅವರೂ ನಾಮಪತ್ರ ಸಲ್ಲಿಸಿದ್ದಾರೆ.
ಅವರೊಂದಿಗೆ ನಾನು ,ಸೋಮಣ್ಣ ಮತ್ತು ಸವದಿಯವರು ಮಾತುಕತೆ ನಡೆಸಿದ್ದೇವೆ. ನಾಮಪತ್ರ ವಾಪಸ್ ಪಡೆಯಲು ಇನ್ನು ಸಮಯವಿದೆ, ನೋಡೋಣ ಎಂದರು.










