ಕೋವಿಡ್ ವ್ಯಾಕ್ಸಿನೇಷನ್ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸೆಲೆಬ್ರಿಟಿಗಳು
ಕೋವಿಡ್-19 ಸಾಂಕ್ರಾಮಿಕದಿಂದ ದೇಶದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ವ್ಯಾಕ್ಸಿನೇಷನ್ ಈಗಾಗಲೇ ವಿಶ್ವದಾದ್ಯಂತ ಪ್ರಾರಂಭವಾಗಿದೆ.
ಭಾರತದಲ್ಲಿಯೂ ವ್ಯಾಕ್ಸಿನೇಷನ್ ಪ್ರಕ್ರಿಯೆಯು ಪ್ರಾರಂಭವಾಗಿ ಮೂರು ತಿಂಗಳುಗಳು ಕಳೆದಿದ್ದು, ರಾಷ್ಟ್ರವು 14 ಕೋಟಿ ಡೋಸ್‌ಗಳನ್ನು ನೀಡಿ ಅತ್ಯಂತ ವೇಗವಾಗಿ ವ್ಯಾಕ್ಸಿನೇಷನ್ ನೀಡುತ್ತಿರುವ ರಾಷ್ಟ್ರ ಎಂದೆನಿಸಿಕೊಂಡಿದೆ.
ಆದರೆ ಅತ್ಯಧಿಕ ಪ್ರಮಾಣದಲ್ಲಿನ ಜನಸಂಖ್ಯೆಯ ಹಿನ್ನೆಲೆಯಲ್ಲಿ ಪ್ರತಿದಿನವೂ ದಾಖಲೆಯ ಸಂಖ್ಯೆಯ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಇದಲ್ಲದೆ, ಅನೇಕರು ವ್ಯಾಕ್ಸಿನೇಷನ್ ಪಡೆಯುತ್ತಿಲ್ಲ. ಇವೆಲ್ಲವುಗಳ ನಡುವೆ ಕೆಲವು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿರಿಯ ನಾಗರಿಕರು ತಮ್ಮ ಲಸಿಕೆಯ ಡೋಸ್ ಸ್ವೀಕರಿಸಲು ದೀರ್ಘವಾದ ಸರತಿ ಸಾಲಿನಲ್ಲಿ ನಿಲ್ಲುವುದು ಕಷ್ಟಕರವಾಗಿದೆ ಎಂದು ಹಿಂದಿ ನಟಿ ತಾನಿಷ್ಠ ಚಟರ್ಜಿ ಪ್ರಕ್ರಿಯೆ ಬಗ್ಗೆ ತಮ್ಮ ಅತೃಪ್ತಿ ಹೊರಹಾಕಿದ್ದಾರೆ.
ಮನೆ-ಮನೆಗೆ-ವ್ಯಾಕ್ಸಿನೇಷನ್ ಪ್ರಕ್ರಿಯೆ ಅಥವಾ ಮೊಬೈಲ್ ವ್ಯಾನ್‌ಗಳು ಈ ಪ್ರಕ್ರಿಯೆಯನ್ನು ಸುಲಭಗೊಳಿಸಬಹುದು ಎಂದು ಅವರು ಸಲಹೆಯನ್ನು ನೀಡಿದ್ದಾರೆ.
Please consider this. Thank you @priyankac19 @MoHFW_INDIA Please allow Mohalla Van vaccination for senior citizens. Many cant stand or even sit in ques in hospitals. https://t.co/nDxRncywka
— TannishthaChatterjee (@TannishthaC) April 28, 2021
ಮಹಾರಾಷ್ಟ್ರ ಮುಖ್ಯಮಂತ್ರಿ, ಆರೋಗ್ಯ ಸಚಿವಾಲಯ ಮತ್ತು ಶಿವಸೇನೆ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಅವರನ್ನು ಟ್ಯಾಗ್ ಮಾಡಿರುವ ತಾನಿಷ್ಠ #MaharashtraFightsCorona ಮಿಷನ್ ನಾನು ವಿನಮ್ರ ವಿನಂತಿಯನ್ನು ಮಾಡುತ್ತಿದ್ದೇನೆ ಎಂದಿದ್ದಾರೆ
ನಂತರ ಈ ಐಡಿಯಾ ಕ್ಕೆ ಥಮ್ಸ್ ಅಫ್ ನೀಡಿರುವ ಪ್ರಿಯಾಂಕಾ ಚತುರ್ವೇದಿ ಒಳ್ಳೆಯ ಸಲಹೆ, ಶೀಘ್ರದಲ್ಲೇ ಅದನ್ನು ಕೇಂದ್ರ ಸಚಿವಾಲಯ ಅನುಮೋದಿಸಲಾಗುವುದು ಎಂದು ಆಶಿಸುತ್ತೇನೆ ಎಂದಿದ್ದಾರೆ.
ನಟಿ ಸಯಾನಿ ಗುಪ್ತಾ ವ್ಯಾಕ್ಸಿನೇಷನ್ ಸಮಯದಲ್ಲಿ ಅನುಭವಿಸಿದ ವೈಯಕ್ತಿಕ ಸಮಸ್ಯೆಗಳನ್ನು ಹಂಚಿಕೊಂಡಿದ್ದು, ಈ ಪ್ರಕ್ರಿಯೆಯನ್ನು ‘ದುಃಸ್ವಪ್ನ’ ಎಂದು ಕರೆದಿದ್ದಾರೆ. ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ತಮ್ಮ ಎರಡನೇ ಡೋಸ್ ಪಡೆಯಲು ಕೋಲ್ಕತ್ತಾದ ಮೂರು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು, ಆದರೆ ಕೇಂದ್ರಗಳಲ್ಲಿ ಡೋಸ್ ಮುಗಿದಿತ್ತು. ಹಿರಿಯ ನಾಗರಿಕರು ಬೆಳಿಗ್ಗೆ 6 ಗಂಟೆಯಿಂದಲೇ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ ಮತ್ತು ಪ್ರಕ್ರಿಯೆಯ ಉತ್ತಮ ನಿರ್ವಹಣೆಗಾಗಿ ಆಶಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
Even getting the vaccines has become a nightmare. My uncle,aunt went to 3 hospitals in Calcutta for their 2nd dose today & every place had run out.
Apparently senior citizens queuing up since 6am.
There has to be a better way to administer this & not risk people getting infected— Sayani Gupta (@sayanigupta) April 27, 2021
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಪುರಸಭೆಯ ನಿಗಮದ ಲಸಿಕೆ ಕೇಂದ್ರದಲ್ಲಿ ಲಸಿಕೆ ಸರಬರಾಜು ದಾಸ್ತಾನು ಇಲ್ಲ ಎಂದು ನೆಟ್ಟಿಗರ ವೀಡಿಯೊಗೆ ಪ್ರತಿಕ್ರಿಯೆಯಾಗಿ ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಗರಿಕರು ಸರದಿಯಲ್ಲಿ ದೀರ್ಘಕಾಲ ನಿಂತಿದ್ದರು ಆದರೆ ಸ್ಟಾಕ್ ಮುಗಿದ ಬಗ್ಗೆ ಸಹ ಅವರಿಗೆ ಮಾಹಿತಿ ನೀಡಿಲ್ಲ ಎಂದು ನೆಟ್ಟಿಗರು ಹೇಳಿದ್ದು, ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ವಾದಿಸುತ್ತಿರುವುದು ಕಂಡುಬಂತು.
ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ‘ಲಭ್ಯವಿಲ್ಲ’ ಫಲಕವನ್ನು ನೋಡಲು ಜನರು ದೂರದಿಂದ ಬರುವುದು ಸರಿಯಲ್ಲ ಎಂದು ಪಂಡಿತ್ ಬರೆದಿದ್ದಾರೆ. ಇದನ್ನು ವ್ಯವಸ್ಥೆಯ ಸಂಪೂರ್ಣ ಕುಸಿತ ಎಂದು ಕರೆದ ಅವರು, ಅಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಸಾರ್ವಜನಿಕ ಘೋಷಣೆ ಮಾಡಬೇಕೆಂದು ಕೋರಿದರು.
ಭಾರತ ವೇಗವಾಗಿ 14 ಕೋಟಿ ವ್ಯಾಕ್ಸಿನೇಷನ್ ಪ್ರಮಾಣವನ್ನು ತಲುಪಿದೆ. ಕೇವಲ 99 ದಿನಗಳಲ್ಲಿ 14 ಕೋಟಿ ಕೋವಿಡ್-19 ಲಸಿಕೆ ಪ್ರಮಾಣವನ್ನು ನೀಡುವ ವಿಶ್ವದ ಅತಿ ವೇಗದ ದೇಶವಾಗಿ ಭಾರತ ಮಾರ್ಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ದೇಹವು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಲು ಈ ರೀತಿ ಮಾಡಿ#Saakshatv #healthtips #immunity https://t.co/5t5Bbj6Bod
— Saaksha TV (@SaakshaTv) April 26, 2021
ಸುಲಭವಾಗಿ ತಯಾರಿಸಿ ವೆಜಿಟೇಬಲ್ ಫ್ರೈಡ್ ರೈಸ್#Saakshatv #cookingrecipe #vegetable #friedrice https://t.co/ov1kK94lbw
— Saaksha TV (@SaakshaTv) April 25, 2021
ತೆರೆದು ಓದದ ಆ ಪತ್ರದಲ್ಲಿ ಅಮ್ಮನ ಉಸಿರಿತ್ತು!#ಚೈತ್ರ_ಕಬ್ಬಿನಾಲೆ https://t.co/0WRYp2RVbh
— Saaksha TV (@SaakshaTv) April 28, 2021
ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಮಗು ಮಿಲಿಯನೇರ್ ಆಗಬಹುದು !#LICPolicy #Moneybackplan https://t.co/RHCYNqFfPr
— Saaksha TV (@SaakshaTv) April 21, 2021
#Celebrities #vaccination #nightmare