ರಾಜ್ಯ ಸರ್ಕಾರದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ. ಸದಾಶಿವನಗರದಲ್ಲಿರುವ ನಿವಾಸದಲ್ಲಿ ಡಿಕೆಶಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರ ಕರೆ ಮಾಡುತ್ತಿದ್ದಾರೆ. ಜೊತೆಗೆ ಬೇರೆ ಸಂಘಟನೆಗಳ ನಾಯಕರು ಕರೆ ಮಾಡುತ್ತಿದ್ದಾರೆ. ಪ್ರತಿಯೊಬ್ಬ ನಾಗರಿಕ ಕೂಡ ಮನೇಲಿ ಇರಬೇಕು ಅಂತ ಪಿಎಂ ಸೂಚನೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರಗಳು ತಮ್ಮದೆ ಆದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾವೆ. ಈ ಸಮಯದಲ್ಲಿ ನಾನು ಆ ಬಗ್ಗೆ ಮಾತನಾಡುವುದಿಲ್ಲ. ಪೊಲೀಸರು ತಮ್ಮದೇ ಶೈಲಿ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಹೊಡೆಯೋದು, ತುಳಿಯೋ ಕೆಲಸ ಮಾಡುತ್ತಿದ್ದಾರೆ. ಅಂತಹ ಅಪರಾಧ ಜನ ಏನ್ ಮಾಡಿದ್ದಾರೋ ಗೊತ್ತಿಲ್ಲ.
ಆರ್.ಎಸ್.ಎಸ್ ನವರು ಹೊರಗಡೆ ಓಡಾಡುತ್ತಿದ್ದಾರೆ. ನಾನು ಅವರ ಕೆಲಸದ ಬಗ್ಗೆ ಮಾತನಾಡುವುದಿಲ್ಲ. ಆರ್.ಎಸ್.ಎಸ್ ನವರು ಅನುಮತಿ ಪಡೆದಿದ್ದೇ
ವೆ ಅಂತ ಕಲೆಕ್ಷನ್ ಮಾಡುತ್ತಿದ್ದಾರೆ. ಐದು ಕೆ.ಜಿ ಅಕ್ಕಿ, ಸಾಲ್ಟ್, ಅಡುಗೆ ಎಣ್ಣೆ ಕೊಡುತ್ತೇವೆ ಅಂತ ಗಾಡಿಗಳಲ್ಲಿ ಓಡಾಡ್ತಿದ್ದಾರೆ. ಇದಕ್ಕೆ ಸಿಎಂ ಅವರು ಅನುಮತಿ ಕೊಟ್ಟಿದ್ದಾರಾ ?. ಎಲ್ಲರೂ ಸೇವೆ ಮಾಡಲು ರೆಡಿಯಾಗಿದ್ದಾರೆ. ಆದರೆ ಇವರು ಬೇಕಾಬಿಟ್ಟಿ ಓಡಾಡ್ಕೊಂಡು ಇದ್ದಾರೆ ಕೊರೊನಾ ಇದು ಪ್ರಪಂಚದ ಸಮಸ್ಯೆ, ದೇಶದ ಸಮಸ್ಯೆ ನಾವು ಎಲ್ಲ ರೀತಿಯ ಸಹಕಾರ ಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಬಿಜೆಪಿ ಕಾರ್ಯಕರ್ತರು ರಾಜಕೀಯ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಸರ್ಕಾರ ಒಂದೇ ಒಂದು ಪ್ಲಾನ್ ಆಫ್ ಆ್ಯಕ್ಷನ್ ತೆಗೆದುಕೊಂಡಿಲ್ಲ. ನಮ್ಮನ್ನು ಕರೆದು ಸಲಹೆನೂ ಪಡೆಯದೇ ಹೋಗುತ್ತಿದ್ದಾರೆ. ಇಬ್ಬರು ಸಚಿವರ ನಡುವೆ ಗೊಂದಲ ಇದೆ ಅನ್ನೋದನ್ನ ನೋಡ್ತಾ ಇದ್ದೀವಿ. ಇದು ನಿಮ್ಮ ಪಾರ್ಟಿ ಸಮಸ್ಯೆನಾ ಅಥಾವ ಆಡಳಿತ ಸಮಸ್ಯೆನಾ. ಇಬ್ಬರು ಅತೀ ಬುದ್ದಿವಂತ ಸಚಿವರಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ.
ಇನ್ನೂ ಫೋನ್ ಎತ್ತಿದ್ರೆ ಕೆಮ್ಮೋದು ಬರುತ್ತೆ, ಅದನ್ನ ಕೇಳಿದ್ರೆ ನಮ್ಗೂ ಕೆಮ್ಮು ಜಾಸ್ತಿಯಾಗುತ್ತೆ. ಗಡಿ ವಿಚಾರ, ನೀರು, ಭೂಮಿ ವಿಚಾರ ಬಂದಾಗ ಸರ್ವಪಕ್ಷ ಸಭೆ ಕರೆದು ಮಾತಾಡೋದು ವಾಡಿಕೆ. ಸರ್ವ ಪಕ್ಷ ಸಭೆ ಕರೆಯಬೇಕು ಅಂತ ನಾನು ಒತ್ತಾಯ ಮಾಡ್ತೀನಿ. ಪ್ರಧಾನಿ ಮೋದಿ ಕೂಡ ಸರ್ವಪಕ್ಷ ಸಭೆ ಕರೆಯಬೇಕು. ನಮ್ಮ ಜಿಲ್ಲೆಯಲ್ಲೂ ಶಂಕಿತರು ಹೆಚ್ಚಾಗಿದ್ದಾರೆ. ನಮ್ಮ ಡ್ರೈವರ್ ಗಳು ಕೂಡ ಬೆಂಗಳೂರಿನಿಂದ ಹೋಗಿದ್ದಾರೆ ಎಂದು ಹೇಳಿದ್ದಾರೆ.
ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!
ಜ್ಯೋತಿಷ್ಯ ಶಾಸ್ತ್ರವು ಒಬ್ಬ ಮನುಷ್ಯನ ಹುಟ್ಟಿನಿಂದ ಸಾ’ವಿ’ನ ತನಕ ಬರುವ ಆತನ ಪಾಲಿಗೆ ಬರುವ ಕ’ಷ್ಟ, ಸುಖ, ದುಃ’ಖ ಗಂಡಾಂತರಗಳ ಬಗ್ಗೆ ಮಾಹಿತಿ ಕೊಡುತ್ತದೆ. ಇದು ನಮ್ಮ...








