ಬೆಂಗಳೂರು : ಬಿಜೆಪಿ ಕೇಂದ್ರ ಸಮಿತಿ ಕೊಟ್ಟ ಶಾಕ್ ಗೆ ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಒಂದೆಡೆ ರಾಜ್ಯಸಭೆ ಚುನಾವಣೆಗೆ ಟಿಕೆಟ್ ಪಡೆಬೇಕು ಎಂದು ರಮೇಶ್ ಕತ್ತಿ ಹಾಗೂ ಪ್ರಭಾಕರ್ ಕೋರೆ, ಉದ್ಯಮಿ ಪ್ರಕಾಶ್ ಶೆಟ್ಟಿ ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ಕೊನೆ ಹಂತದಲ್ಲಿ ಇವರ ಕನಸು ಭಗ್ನಗೊಂಡಿದೆ. ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಹೆಸರುಗಳು ರಾಜ್ಯಸಭೆಗೆ ಪೈನಲ್ ಆಗಿವೆ. ಇದರ ಹಿಂದೆ ಸಂತೋಷ ಅವರ ಪಾತ್ರವಿದೆ ಎಂದು ಹೇಳಾಗುತ್ತಿತ್ತು. ಇದೀಗ ಇದಕ್ಕೆ ಪೂರಕವಾಗಿ ಸಚಿವ ಸಿಟಿ ರವಿ ಬಿ.ಎಲ್.ಸಂತೋಷ್ ನಮ್ಮ ರಾಷ್ಟ್ರೀಯ ನಾಯಕ ಎಂದು ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲು ಬಿ.ಎಲ್ ಸಂತೋಷ ಅವರು ಪ್ರಮುಖ ಪಾತ್ರವಹಿಸಿದ್ದರು. ಇದೀಗ ರಾಜ್ಯಸಭೆಗೆ ಚುನಾವಣೆಗೆ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಬಿಜೆಪಿ ಅಭ್ಯರ್ಥಿಗಳು ಆಗಲು ಸಂತೋಷ್ ಅವರ ಪಾತ್ರವಹಿಸಿದ್ದಾರೆ. ಬಿ.ಎಲ್ ಸಂತೋಷ್ ನಮ್ಮ ರಾಷ್ಟ್ರೀಯ ನಾಯಕರು. ಅವರ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.








