ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸಿಮೆಂಟ್ ಬೆಲೆ ಹೆಚ್ಚಳ
ಒಟ್ಟು ಮೂರು ಹಂತಗಳಲ್ಲಿ ಬೆಲೆ ಏರಿಸಲು ಕಂಪನಿ ನಿರ್ಧಾರ
ಒಂದು ಚೀಲದ ಸಿಮೆಂಟ್ ಬೆಲೆ 55 ರೂ. ಹೆಚ್ಚಳ
2022ರ 4ನೇ ತ್ರೈಮಾಸಿಕದ ನಷ್ಟವನ್ನು ಸರಿದೂಗಿಸಲು ಭೂಮಿ ಮಾರಾಟ
ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎನ್.ಶ್ರೀನಿವಾಸನ್ ಮಾಹಿತಿ
Indian cement limited ಮುಂದಿನ ತಿಂಗಳು ಸಿಮೆಂಟ್ ಬೆಲೆ ಏರಿಕೆ ಮಾಡಲು ನಿರ್ಧರಿಸಿದೆ. ಒಟ್ಟು ಮೂರು ಹಂತಗಳಲ್ಲಿ ಬೆಲೆ ಏರಿಸಲು ಕಂಪನಿ ನಿರ್ಧರಿಸಿದೆ. ಅಲ್ಲದೇ ಆರ್ಥಿಕ ವರ್ಷ 2022ರ ನಾಲ್ಕನೇ ತ್ರೈಮಾಸಿಕದ ನಷ್ಟವನ್ನು ಸರಿದೂಗಿಸಲು ಭೂಮಿಯನ್ನು ಮಾರಾಟ ಮಾಡುತ್ತಿದೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಇಂಡಿಯಾ ಸಿಮೆಂಟ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎನ್.ಶ್ರೀನಿವಾಸನ್ ಅವರು ಒಂದು ಚೀಲದ ಸಿಮೆಂಟ್ ಬೆಲೆ 55 ರೂ. ಹೆಚ್ಚಿಸಲಾಗುದು. ಜೂನ್ 1ರಂದು 20 ರೂ. ಜೂನ್ 15ರಂದು 15 ರೂ. ಮತ್ತು ಜೂನ್ 20 ರೂ. ಏರಿಕೆ ಆಗಲಿದೆ.
ಈ ಬೆಲೆ ಏರಿಕೆ ಏರುತ್ತಿರುವ ವೆಚ್ಚ ಭರಿಸಲು ನಮಗೆ ಸಹಾಯ ಮಾಡಲಿದೆ. ಭವಿಷ್ಯದಲ್ಲಿ ನಮ್ಮ ಲಾಭ-ನಷ್ಟದ ಖಾತೆ ಉತ್ತಮವಾಗಿ ಕಾಣಲು ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ..








