ಪ್ರಯಾಣಿಕರ ಮೇಲೆ ಹರಿದ ಲಾರಿ ; ಬಾಲಕಿ ದೇಹ ಛಿದ್ರ ಛಿದ್ರ
ಯಾದಗಿರಿ : ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕೆ ಮೇಲೆ ಸಿಮೆಂಟ್ ಲಾರಿ ಹರಿದ ಪರಿಣಾಮ ಬಾಲಕಿ ಮೃತಪಟ್ಟು ನಾಲ್ವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಯಾದಗಿರಿಯ ಗುರುಮಿಠಕಲ್ ನ ಬೋರಬಂಡದಲ್ಲಿ ನಡೆದಿದೆ.
ಗುರುಮಿಠಕಲ್ ಗೆ ಬರಲು ಬಸ್ ನಿಲ್ದಾಣದ ಮುಂದೆ ಪ್ರಯಾಣಿಕರು ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಪ್ರಯಾಣಿಕರ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೂರು ವರ್ಷದ ಬಾಲಕಿ ಮೋನಿಕಾ ಮೃತಪಟ್ಟಿದ್ದಾಳೆ.
ಉಳಿದ ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಗುರುಮಿಠಕಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯ ಲಾರಿ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










