ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ತನ್ನ 2025 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಭಾರತಾದ್ಯಂತ 4500 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ನೇಮಕಾತಿ ವಿವರಗಳು
ಸಂಸ್ಥೆ ಹೆಸರು: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಒಟ್ಟು ಹುದ್ದೆಗಳ ಸಂಖ್ಯೆ: 4500
ಹುದ್ದೆಗಳ ಹೆಸರು: ಅಪ್ರೆಂಟಿಸ್
ಉದ್ಯೋಗ ಸ್ಥಳ: ಭಾರತಾದ್ಯಂತ
ಹುದ್ದೆಗಳ ಪ್ರಕಾರ: ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ತರಬೇತಿ ಪಡೆದ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ.
ವೇತನ ಶ್ರೇಣಿ
ಅಭ್ಯರ್ಥಿಗಳಿಗೆ ಮಾಸಿಕ ವೇತನ: ₹15,000/- ರೂ ಗಳವರೆಗೆ ನಿಗದಿಪಡಿಸಲಾಗಿದ್ದು, ಬ್ಯಾಂಕಿನ ನಿಯಮಾವಳಿಯಂತೆ ಪಡೆಯಲಾಗುತ್ತದೆ.
ವಿದ್ಯಾರ್ಹತೆಗಳು
ಶೈಕ್ಷಣಿಕ ಅರ್ಹತೆ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿರಬೇಕು. ಯಾವುದೇ ವಿಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ (07-06-2025ರ ತನಕ)
ಕನಿಷ್ಠ: 20 ವರ್ಷ
ಗರಿಷ್ಠ: 28 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ: 03 ವರ್ಷ
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: 05 ವರ್ಷ
ವಿಕಲಚೇತನ ಅಭ್ಯರ್ಥಿಗಳಿಗೆ:
ಯುಆರ್: 10 ವರ್ಷ
ಒಬಿಸಿ: 13 ವರ್ಷ
ಎಸ್ಸಿ/ಎಸ್ಟಿ: 15 ವರ್ಷ
ಅರ್ಜಿ ಶುಲ್ಕ
ವಿಕಲಚೇತನ ಅಭ್ಯರ್ಥಿಗಳು: ₹400/-
ಎಸ್ಸಿ/ಎಸ್ಟಿ/ಮಹಿಳಾ/EWS ಅಭ್ಯರ್ಥಿಗಳು: ₹600/-
ಇತರೆ ಅಭ್ಯರ್ಥಿಗಳು: ₹800/-
ಪಾವತಿ ವಿಧಾನ: ಆನ್ಲೈನ್ ಮೂಲಕ ಪಾವತಿ ಮಾಡಲು ಅವಕಾಶವಿದೆ.
ಆಯ್ಕೆ ವಿಧಾನ
– ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ:
– ಆನ್ಲೈನ್ ಪರೀಕ್ಷೆ: ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ ಅರಿವು, ಸಂಖ್ಯಾತ್ಮಕ ನಿರ್ಣಯ, ಅಂಕಗಣಿತ, ಇಂಗ್ಲೀಷ್ ಸೇರಿದಂತೆ ವಿಷಯಗಳನ್ನು ಒಳಗೊಂಡಂತೆ ಪರೀಕ್ಷೆ ನಡೆಸಲಾಗುತ್ತದೆ.
– ಸ್ಥಳೀಯ ಭಾಷಾ ಪರೀಕ್ಷೆ: ಅಭ್ಯರ್ಥಿಗಳು ಆಯ್ಕೆ ಮಾಡಿದ ರಾಜ್ಯದ ಪ್ರಕಾರ ಸ್ಥಳೀಯ ಭಾಷೆಯಲ್ಲಿ ನೈಪುಣ್ಯದ ಪರೀಕ್ಷೆ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ
ಆನ್ಲೈನ್
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 07-ಜೂನ್-2025
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 23-ಜೂನ್-2025
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 25-ಜೂನ್-2025








