ಕೇಂದ್ರ ಬಜೆಟ್ ನತ್ತ ಎಲ್ಲರ ಚಿತ್ತ : ಕರ್ನಾಟಕದ ಋಣ ತೀರಿಸ್ತಾರಾ ನಿರ್ಮಲಾ..?
ಬೆಂಗಳೂರು : ದೇಶವಾಸಿಗಳ ಚಿತ್ತ ಈಗ ಕೇಂದ್ರ ಬಜೆಟ್ ನತ್ತ ನೆಟ್ಟಿದೆ. ಸೋಮವಾರ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಪ್ರಸಕ್ತ ಸಾಲಿನ ಬಜೆಟ್ ಮಂಡನೆಯಾಗಲಿದೆ.
ಈ ಹಿನ್ನೆಲೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಕರ್ನಾಟಕಕ್ಕೆ ಬಂಪರ್ ಗಿಫ್ಟ್ ಕೊಡಲಿದ್ದಾರೆ ಅನ್ನೋ ನಿರೀಕ್ಷೆಗಳು ರಾಜ್ಯದಲ್ಲಿ ಗರಿಗೆದರಿದೆ.
ಯಾಕೆಂದ್ರೆ ನಿರ್ಮಲಾ ಸೀತಾರಾಮನ್ ಅವನ್ನು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿಕೊಡಲಾಗಿದೆ. ಹೀಗಾಗಿ ರಾಜ್ಯ ಋಣ ತೀರಿಸುವ ಜವಾಬ್ದಾರಿ ಅವರ ಮೇಲಿದೆ.
ಆದ್ರೆ ಕೊರೊನಾದಿಂದಾದ ಎದುರಾಗಿರುವ ಆರ್ಥಿಕ ಸಂಕಷ್ಟ, ಜಿಎಸ್ ಟಿ ಆದಾಯ ಕುಸಿತ, ಕಚ್ಛಾತೈಲಗಳ ಬೆಲೆ ಏರಿಕೆ, ಉತ್ಪಾದನೆ ಕ್ಷೀನೆ, ನಿರುದ್ಯೋಗ ಸೇರಿ ಅನೇಕ ಸಮಸ್ಯೆಗಳನ್ನ ಸರಿದೂಗಿಸಿಕೊಂಡು, ಬಜೆಟ್ ಮಂಡಿಸಬೇಕಾದ ಪರಿಸ್ಥಿತಿಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಸಿಲುಕಿದ್ದಾರೆ.
ಇದೇ ಕಾರಣಕ್ಕಾಗಿ ಈ ಬಾರಿಯ ಬಜೆಟ್ ಬಾರಿ ಮಹತ್ವ ಪಡೆದುಕೊಂಡಿದೆ. ಆದಾಗ್ಯೂ ಕೊರೊನಾ ಲಾಕ್ ಡೌನ್ ಬಳಿಕ ನಿರೀಕ್ಷೆಗೂ ಮೀರಿ ಜಿಎಸ್ ಟಿ ಸಂಗ್ರಹವಾಗಿದ್ದು, ನಿರ್ಮಲಾ ಅವರು ತಮ್ಮ ಬಜೆಟ್ ನಲ್ಲಿ ಒಂದಿಷ್ಟು ಕೊಡುಗೆಗಳನ್ನು ನೀಡಬಹುದೆಂಬ ನಿರೀಕ್ಷೆಗಳಿವೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಕೆಲ ಬೇಡಿಕೆಗಳನ್ನ ಮುಂಡಿಟ್ಟಿರುವ ಕರ್ನಾಟಕ
ಸರಣಿ ಹೊಡೆತಗಳಿಂದ ಸಂಕಷ್ಟದಲ್ಲಿರುವ ಕರ್ನಾಟಕ ಈಗಾಗಲೇ ಕೇಂದ್ರಕ್ಕೆ ಕೆಲವೊಂದು ಬೇಡಿಕೆಗಳನ್ನು ಇಟ್ಟಿದೆ.
ಪ್ರಸಕ್ತ ವರ್ಷ ರಾಜ್ಯದ ಹಂಚಿಕೆಯನ್ನು ಪರಿಷ್ಕರಿಸದೇ ಕೇಂದ್ರ ಹಣಕಾಸು ಪ್ರಾಯೋಜಿತ ಯೋಜನೆಗಳಿಗೆ ಅನುದಾನವನ್ನು ಗಣನೀಯವಾಗಿ ಹೆಚ್ಚಿಸುವಂತೆ ಕರ್ನಾಟಕ ಕೋರಿದೆ.
ಇಲ್ಲದೇ 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಘೋಷಿಸಿರುವ 5,495 ಕೋಟಿ ರೂ. ವಿಶೇಷ ಅನುದಾನ ಸೇರಿದಂತೆ ಎಲ್ಲಾ ಬಾಕಿಗಳನ್ನು ತೆರವುಗೊಳಿಸಲು ಮನವಿ ಮಾಡಿಕೊಂಡಿದೆ.
ಹೀಗೆ ಹಲವಾರು ಬೇಡಿಕೆಗಳನ್ನು ಕರ್ನಾಟಕ ಕೇಂದ್ರದ ಮುಂದೆ ಇಟ್ಟಿದ್ದು, ಇದಕ್ಕೆಲ್ಲ ನಿರ್ಮಲಾ ಬಜೆಟ್ ಉತ್ತರ ನೀಡಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









