ನವದೆಹಲಿ: ಸಂಕಷ್ಟದಲ್ಲಿರುವ ದೇಶದ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2020-21ನೇ ಸಾಲಿನ ಬೆಂಬಲ ಬೆಲೆ ಘೋಷಿಸಿ ಆದೇಶ ಹೊರಡಿಸಿದೆ.

ಗೋದಿ ಮೇಲೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‍ಗೆ 50 ರೂಪಾಯಿ ಹೆಚ್ಚಿಸುವ ಮೂಲಕ 1975 ರೂ.ಗೆ ನಿಗಧಿ ಮಾಡಲಾಗಿದೆ.
ಜೋಳದ ಮೇಲೆ ಬೆಂಬಲ ಬೆಲೆಯನ್ನು 75 ರೂ. ಹೆಚ್ಚಿಸಲಾಗಿದ್ದು, ಕ್ವಿಂಟಾಲ್‍ಗೆ 1600 ರೂ. ನಿಗಧಿ ಮಾಡಿದ್ದರೆ, ಕಡಲೆ ಬೇಳೆ ಮೇಲೆ ಬೆಂಬಲ ಬೆಲೆಯನ್ನು 225 ರೂ. ಹೆಚ್ಚಿಸಲಾಗಿದ್ದು, ಒಟ್ಟು ಬೆಲೆಯನ್ನು ಕ್ವಿಂಟಾಲ್‍ಗೆ 5100ರೂ.ಗೆ ನಿಗಧಿಪಡಿಸಲಾಗಿದೆ.
ಕೆಂಪು ತೊಗರಿ ಬೇಳೆಗೆ 300 ರೂ. ಬೆಂಬಲ ಬೆಲೆ ನಿಗಧಿಪಡಿಸಿ ಕ್ವಿಂಟಾಲ್‍ಗೆ 5100ರೂ.ಗೆ ಹೆಚ್ಚಳ ಮಾಡಲಾಗಿದೆ.
ಸಾಸಿವೆಗೆ 225 ರೂ. ಬೆಂಬಲ ಬೆಲೆ ಘೋಷಣೆ ಮಾಡಿ ಪ್ರತಿ ಕ್ವಿಂಟಾಲ್ ಬೆಲೆಯನ್ನು 4650ಕ್ಕೆ ನಿಗದಿ ಮಾಡಿದ್ದರೆ, ಕುಸುಬೆಗೆ 112 ರೂ. ಬೆಂಬಲ ಬೆಲೆ ಪ್ರಕಟಿಸಲಾಗಿದ್ದು, ಪ್ರತಿ ಕ್ವಿಂಟಾಲ್‍ಗೆ 5327ಗೆ ತಂದು ನಿಲ್ಲಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಕ್ವಿಂಟಾಲ್‍ಗೆ ಬೆಂಬಲ ಬೆಲೆ ವಿವರ ಹೀಗಿದೆ..
* ಗೋದಿ: ಬೆಂಬಲ ಬೆಲೆ 50ರೂ, ಒಟ್ಟು ದರ 1975 ರೂ.
* ಜೋಳ: ಬೆಂಬಲ ಬೆಲೆ 75 ರೂ, ಒಟ್ಟು ದರ 1600 ರೂ.
* ಕಡಲೆ ಬೇಳೆ: ಬೆಂಬಲ ಬೆಲೆ 225 ರೂ, ಒಟ್ಟು ದರ 5100ರೂ.
* ಕೆಂಪು ತೊಗರಿ ಬೇಳೆ: ಬೆಂಬಲ ಬೆಲೆ 300 ರೂ, ಒಟ್ಟುದರ 5100ರೂ.
* ಸಾಸಿವೆ: ಬೆಂಬಲ ಬೆಲೆ 225 ರೂ. ಒಟ್ಟು ಬೆಲೆ 4650 ರೂ.
* ಕುಸುಬೆ: ಬೆಂಬಲ ಬೆಲೆ 112 ರೂ, ಒಟ್ಟು ಬೆಲೆ 5327ರೂ.








