Central govt :2000 ರೂ ನೋಟು ಮುದ್ರಣಕ್ಕೆ ಹೊಸ ಆದೇಶ ನೀಡಿಲ್ಲ – ಕೇಂದ್ರ ಸರ್ಕಾರ
ಮುದ್ರಣಾಲಯಗಳಲ್ಲಿ 2000 ರೂ ಮುಖ ಬೆಲೆಯ ನೋಟುಗಳನ್ನು ಮುದ್ರಿಸಲು ಯಾವುದೇ ಹೊಸ ಆದೇಶವನ್ನು ನೀಡಿಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಈ ವಿಚಾರವಾಗಿ ಲೋಕಸಭೆಯಲ್ಲಿ ಕೆಲ ಸಂಸದರು ಕೇಳಿದ ಪ್ರಶ್ನೆಗೆ ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದರು.
ಭಾರತೀಯ ರಿಸರ್ವ್ ಬ್ಯಾಂಕ್, 3 ವರ್ಷಗಳ ಹಿಂದೆಯೇ 2000 ರೂ. ಮುಖ ಬೆಲೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸಿದ್ದು, 2018-19ರಿಂದ ಮುದ್ರಣಾಲಯಗಳಲ್ಲಿ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಮುದ್ರಿಸಲು ಯಾವುದೇ ಹೊಸ ಆದೇಶವನ್ನು ನೀಡಿಲ್ಲವೆಂದು ಅವರು ತಿಳಿಸಿದರು.
ಹರಿದಾಗ ಅಥವಾ ಕೊಳೆಯಾದಾಗ ಆ ನೋಟುಗಳು ಚಲಾವಣೆಯಾಗುವುದಿಲ್ಲ. ಹಾಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಜೊತೆ ಮಾತನಾಡಿ ನಂತರ ನೋಟು ಮುದ್ರಣದ ಬಗ್ಗೆ ಸರ್ಕಾರವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಪಂಕಜ್ ಚೌಧರಿ ಮಾಹಿತಿ ನೀಡಿದರು.
Central govt: No new order for Rs 2000 note printing – Central Govt